ಬೊಳುವಾರು ಕ್ಷೇತ್ರದಲ್ಲಿ ತುಳು ಅಪ್ಪೆ ಕೂಟದಿಂದ ಮಹಿಷ ವಧೆ ತುಳು ತಾಳಮದ್ದಳೆ

0

ಪುತ್ತೂರು: ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರ ಬೊಳ್ವಾರಿನಲ್ಲಿ ನವರಾತ್ರಿಯ ಪ್ರಯುಕ್ತ ತುಳು ಅಪ್ಪೆ ಕೂಟ ಪುತ್ತೂರು ಇವರಿಂದ ಅ.17 ರಂದು ಮಹಿಷ ವಧೆ ತುಳು ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಗೋವಿಂದ ಪಾಲೆಚ್ಚಾರು, ಮಲ್ಲಿಕಾ ಅಜಿತ್ ಶೆಟ್ಟಿ, ಚೆಂಡೆ ಮದ್ದಲೆಯಲ್ಲಿ ಅನೀಶ್ ಕೃಷ್ಣ, ಧನುಷ್, ಸುಧನ್ವ. ಅರ್ಥದಾರಿಗಳಾಗಿ ಮಹಿಷನಾಗಿ ಹರಿಣಾಕ್ಷಿ ಜೆ. ಶೆಟ್ಟಿ ,ಶ್ರೀದೇವಿಯಾಗಿ ಭಾರತೀ ರೈ, ದಿತಿಯಾಗಿ ಪ್ರೇಮಲತಾ ರಾವ್, ಶ್ರೀಶ ವಾಸವಿಯಾಗಿ ಮಾಲಿನಿ, ಬೃಹ್ಮನಾಗಿ ಶುಭಗಣೇಶ್, ದೇವೇಂದ್ರನಾಗಿ ವೀಣಾ ಸರಸ್ವತಿ, ಸುಪಾರ್ಶ್ವಕ ಮತ್ತು ಮಾಲಿನಿ ದೂತನಾಗಿ ಶಂಕರಿ ಪಟ್ಟೆ, ಶ್ರೀಹರಿಯಾಗಿ ಪುಷ್ಪಾ ರಾಜೇಶ್, ಹರನಾಗಿ ಅಮಿತಾ ಆರ್ ಶೆಟ್ಟಿ ನುಳಿಯಾಲು, ವಿದ್ಯುನ್ಮಾಲಿಯಾಗಿ ಪ್ರತಿಭಾ ಓಕುಣ್ಣಾಯ, ಯಕ್ಷನಾಗಿ ಯಶುಭ ರೈ, ದೇವೇಂದ್ರ ದೂತನಾಗಿ ಪ್ರೇಮ ಕೆಮ್ಮಾಯಿ ಭಾಗವಹಿಸಿದರು. ದೇವಾಳದ ಆಡಳಿತ ಮಂಡಳಿಯ ಸದಸ್ಯರು ತುಳು ಅಪ್ಪೆ ಕೂಟದ ಸದಸ್ಯರಿಗೆ ಶ್ರೀದೇವಿಯ ಪ್ರಸಾದ ನೀಡಿ ಶಾಲು ಹಾಕಿ ಗೌರವಿಸಿದರು.ದೇವಸ್ಥಾನದ ಪದಾಧಿಕಾರಿ ಪ್ರಸನ್ನ ಬಲ್ಲಾಳ್ ಸ್ವಾಗತಿಸಿದರು . ತುಳು ಅಪ್ಪೆ ಕೂಟದ ಅಧ್ಯಕ್ಷೆ ಹರಿಣಾಕ್ಷಿಜೆ. ಶೆಟ್ಟಿ ಧನ್ಯವಾದ ಅರ್ಪಿಸಿದರು

LEAVE A REPLY

Please enter your comment!
Please enter your name here