ಭಾಷಣ ಸ್ಪರ್ಧೆ :ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ನಿಲಿಶಾ ವಿಯೋಲಾ ವೇಗಸ್ ಜಿಲ್ಲಾ ಮಟ್ಟಕ್ಕೆ

0

ಪುತ್ತೂರು: ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮಂಗಳೂರು ವತಿಯಿಂದ 2026-27ನೇ ಸಾಲಿನ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಲಿಶಾ ವಿಯೋಲಾ ವೇಗಸ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

‘ಜವಾಹರಲಾಲ್ ನೆಹರು ಅವರ ಚಿಂತನೆಗಳು’ ವಿಷಯದ ಕುರಿತು ನಡೆದ ಸ್ಪರ್ಧೆಯಲ್ಲಿ ಇವರು ಪ್ರಥಮ ಬಹುಮಾನ ಪಡೆದಿದ್ದಾರೆ. 8ನೇ ತರಗತಿ ವಿದ್ಯಾರ್ಥಿನಿಯಾದ ನಿಲಿಶಾ, ನವೀನ್ ಸ್ಟೀಫನ್ ವೇಗಸ್ ಮತ್ತು ಲೆನಿಟಾ ಪ್ರಿಯಾ ಮೊರಾಸ್ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here