ನಿಡ್ಪಳ್ಳಿ; ಕುಕ್ಕುಪುಣಿಯಿಂದ ಬೊಳುಂಬುಡೆ ನಾಕುಡೇಲು ಅಗಿ ಶ್ರೀ ಶಾಂತದುರ್ಗಾ ದೇವಸ್ಥಾನ ರಸ್ತೆಯ ಪಟ್ಟೆ ಎಂಬಲ್ಲಿ ರಸ್ತೆ ಬದಿ ಗುಡ್ಡ ಜು.7 ರಂದು ರಾತ್ರಿ ಜರಿದು ಬಿದ್ದಿದೆ.
ಗುಡ್ಡ ಇನ್ನಷ್ಟೂ ಕುಸಿಯುವ ಹಂತದಲ್ಲಿದ್ದು ರಸ್ತೆ ಸಂಪರ್ಕ ಕಡಿತ ಗೊಳ್ಳುವ ಭೀತಿ ಎದುರಾಗಿದೆ. ಮಾತ್ರವಲ್ಲ ಅದೇ ಗುಡ್ಡದ ಮೇಲೆ ಚನಿಯರವರ ಮನೆ ಇದ್ದು ಇನ್ನಷ್ಟೂ ಕುಸಿದರೆ ಮನೆಗೆ ಅಪಾಯ ಎದುರಾಗುವ ಸ್ಥಿತಿಯಲ್ಲಿದೆ.