ಪುತ್ತೂರು: ಕಾವಳಪಡೂರು ವಗ್ಗದಲ್ಲಿ ಜು. 25 ರಂದು ನಡೆದ ಬಂಟ್ವಾಳ ತಾಲೂಕು ಮಟ್ಟದ ಚೆಸ್ ಪಂದ್ಯಾಟದ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಪುಣಚ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಎಂ.ಎಸ್.ಅನನ್ಯ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತೀರಾ ಗ್ರಾಮೀಣ ಭಾಗದ ಈ ಪ್ರತಿಭೆ ಯಾವುದೇ ಕೋಚಿಂಗ್ ಪಡೆಯದೆ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.