ತಿಂಗಳಾಡಿ: ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಮಹಾಸಭೆ

0

  • ವ್ಯವಹಾರ ರೂ.12,90,11,925 ನಿವ್ವಳ ಲಾಭ ರೂ.10,15,259 ಶೇ.12 ಡಿವಿಡೆಂಡ್

ಪುತ್ತೂರು: ತಿಂಗಳಾಡಿ ಶ್ರೀ ಲಕ್ಷ್ಮೀ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ನಿಯಮಿತದ 2021-2022 ನೇ ಸಾಲಿನ 7 ನೇ ವಾರ್ಷಿಕ ಮಹಾಸಭೆಯು ಸೆ.04 ರಂದು ಸಂಘದ ಪ್ರಭಾರ ಹರೀಶ ಕೆ.ಪುತ್ತೂರಾಯರವರ ಅಧ್ಯಕ್ಷತೆಯಲ್ಲಿ ಸಂಘದ ಕೇಂದ್ರ ಕಛೇರಿಯ ಆವರಣದಲ್ಲಿ ನಡೆಯಿತು. ಸಹಕಾರಿಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಷ್ಮಾ ಭಟ್‌ರವರು ಹಿಂದಿನ ಮಹಾಸಭೆಯ ವರದಿ ಹಾಗೂ 2021-22 ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಭಾರ ಅಧ್ಯಕ್ಷ ಹರೀಶ ಕೆ.ಪುತ್ತೂರಾಯರವರು, ಸಹಕಾರಿಯು 2021-22 ನೇ ಸಾಲಿನಲ್ಲಿ ಒಟ್ಟು ರೂ.12 ಕೋಟಿ 90 ಲಕ್ಷ 11 ಸಾವಿರದ 925 ವ್ಯವಹಾರ ನಡೆಸಿದ್ದು ರೂ.10,15,259 ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.12 ಡಿವಿಡೆಂಡ್ ಕೊಡಲಾಗುವುದು ಎಂದು ಘೋಷಣೆ ಮಾಡಿದರು. ನಿರ್ದೇಶಕ ಡಾ.ಸುರೇಶ್ ಪುತ್ತೂರಾಯರವರು ಕ್ರಿಯಾ ಯೋಜನೆಯನ್ನು ಓದಿದರು. ನಿರ್ದೇಶಕ ಶ್ರೀಧರ ಬೈಪಡಿತ್ತಾಯರವರು ಬೈಲಾ ತಿದ್ದುಪಡಿ ಮಂಡನೆ ಮಾಡಿದರು.

ಮಹಾಸಭೆಯ ಆರಂಭದಲ್ಲಿ ಗಣಪತಿ ಹೋಮ ಮತ್ತು ಮಹಾಸಭೆಯ ನಂತರ ಲಕ್ಷ್ಮೀಪೂಜೆ ನಡೆಯಿತು. ನಿವೃತ್ತ ಸಿಬ್ಬಂದಿ ವಿಜಯ ನಾರಾಯಣರವರಿಗೆ ಗೌರವಾರ್ಪಣೆ ನಡೆಯಿತು. ಸಹಕಾರಿಯ ಸ್ಥಾಪಕ ಅಧ್ಯಕ್ಷ ಅಚ್ಯುತ ಮೂಡೆತ್ತಾಯರವರು ಶಾಲು ಹಾಕಿ ನಿರ್ದೇಶಕ ಜಯರಾಮ ಕೆದಿಲಾಯರವರು ಹಾರ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿದರು.

ಪ್ರಭಾರ ಅಧ್ಯಕ್ಷ ಹರೀಶ ಕೆ.ಪುತ್ತೂರಾಯ ಅಭಿನಂದನ ನುಡಿಗಳನ್ನು ಆಡಿದರು. ಹಾಲಿ ಅಧ್ಯಕ್ಷ ದಿವಾಕರ ನಿಡ್ವಣ್ಣಾಯ, ಕಾನೂನು ಸಲಹೆಗಾರ ಕಿಶೋರ್ ಕೊಳತ್ತಾಯ, ಮೌಲ್ಯಮಾಪಕ ವಸಂತ ಭಟ್ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು. ಸಭಾ ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಪ್ರಭಾರ ಅಧ್ಯಕ್ಷ ಹರೀಶ ಕೆ ಪುತ್ತೂರಾಯರವರು ಮಾತನಾಡಿ, ಸಹಕಾರಿಯು ಕಡಿಮೆ ವೆಚ್ಚ ಹೆಚ್ಚು ಆಡಳಿತ ಎಂಬ ಸಿದ್ಧಾಂತದೊಂದಿಗೆ ಶೀಘ್ರ ಸ್ಪಂದನೆ, ತ್ವರಿತ ಸೇವೆ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಆಡಳಿತ ಮಂಡಳಿ, ಸದಸ್ಯರ ಸಹಕಾರ, ಸಿಬ್ಬಂದಿ ವರ್ಗದ ಶ್ರಮದಿಂದ ಕರೋನದಂತಹ ಮಹಾಮಾರಿಯ ಸಂದರ್ಭದಲ್ಲೂ ಆರ್ಥಿಕ ಸಂಕಷ್ಟದ ಸಮಯದಲ್ಲಿ ಕೂಡ ಪ್ರಗತಿಯನ್ನು ದಾಖಲಿಸಿದೆ.ಸಿಬ್ಬಂದಿ ಕ್ಷೇಮ, ಸದಸ್ಯರ ಹಿತಾಸಕ್ತಿ, ಸಾರ್ವಜನಿಕ ಅಭಿವೃದ್ಧಿಯೊಂದಿಗೆ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಶಿವಳ್ಳಿ ಸಂಪದದ ಮಾಜಿ ಅಧ್ಯಕ್ಷ ಭಾಸ್ಕರ ಬಾರ್ಯರವರು ಮಾತನಾಡಿ, ಸಹಕಾರಿಯು ಉತ್ತಮ ಬೆಳವಣಿಗೆಗೆ ಮತ್ತು ಸದಸ್ಯರಿಗೆ ಶೇ.12 ಪಾಲು ಮುನಾಫೆ ನೀಡಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ನಿರ್ದೇಶಕರುಗಳಾದ ಬಾಲಕೃಷ್ಣ ಕಿಜಾನ, ವಿಷ್ಣುಮೂರ್ತಿ ಯಂ, ರಾಜೇಂದ್ರ ಪ್ರಸಾದ್ ಯು ಉಪಸ್ಥಿತರಿದ್ದರು. ಆದಿತ್ಯ ಪುತ್ತೂರಾಯ ಪ್ರಾರ್ಥಿಸಿದರು. ನಿರ್ದೇಶಕಿ ವತ್ಸಲಾ ರಾಜ್ಞಿ ವಂದಿಸಿದರು. ಸಿಬ್ಬಂದಿಗಳಾದ ಪುತ್ತೂರು ಶಾಖಾ ವ್ಯವಸ್ಥಾಪಕಿ ಪೃಥ್ವಿ ಎಂ ಮತ್ತು ಕಛೇರಿ ಸಹಾಯಕಿ ಅಶ್ವಿನಿ ಟಿ ಸಹಕರಿಸಿದ್ದರು.

ಸಹಕಾರಿಯ ವಿಶೇಷ ಸೌಲಭ್ಯಗಳು
ಸಹಕಾರಿಯು ಹಿರಿಯ ನಾಗರೀಕರಿಗೆ ಠೇವಣಿಯಲ್ಲಿ ಶೇ.5 ಹೆಚ್ಚು ಬಡ್ಡಿದರ ನೀಡುತ್ತಿದೆ. ಇದಲ್ಲದೆ ವಿಧವೆಯರಿಗೆ, ವಿಶೇಷ ಚೇತನರಿಗೆ, ಮಾಜಿ ಸೈನಿಕರಿಗೆ ಠೇವಣಿ ಅಥವಾ ಸಾಲಗಳ ಬಡ್ಡಿದರದಲ್ಲಿ ವಿಶೇಷ ಪರಿಶೀಲನೆ. ಕಡಿಮೆ ಬಡ್ಡಿದರದಲ್ಲಿ ಚಿನ್ನ ಖರೀದಿ ಸಾಲ ನೀಡಲಾಗುವುದು.

LEAVE A REPLY

Please enter your comment!
Please enter your name here