ಪುತ್ತೂರು : ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಸ.ಉ.ಹಿ.ಪ್ರಾ.ಶಾಲೆ ನೆಲ್ಯಾಡಿ ವತಿಯಿಂದ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ದರ್ಬೆ ಬೆಥನಿ ಆ.ಮಾ ಶಾಲಾ ಬಾಲಕರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ತಂಡದಲ್ಲಿ ಬಿ ಈಶನ್ ಪ್ರಭು, ವಚನ್ ಶೆಣೈ, ಎಸ್ ಮೊಹಮ್ಮದ್ ಹನೀನ್, ಲೂತ್ ರೆಹಮಾನ್, ಪ್ರಥಮ್ ಕಶ್ಯಪ್, ಗಗನ್ ದೀಪ್ ಬಿ ಎಂ, ಮೊಹಮ್ಮದ್ ಆಫ್ರಿದ್, ಜೈಸನ್ ಲೋಬೊ, ಮಹಮ್ಮದ್ ಶಾನ್, ಮಹಮ್ಮದ್ ಸಿಝನ್, ಮೊಹಮ್ಮದ್ ಐಮನ್ ಮತ್ತು ಮೊಹಮ್ಮದ್ ಸವಾದ್ರವರು ಭಾಗವಹಿಸಿದ್ದರು. ಮಹಮ್ಮದ್ ಶಾನ್ ’ಉತ್ತಮ ಎತ್ತುಗೆಗಾರ’ ಮತ್ತು ಮೊಹಮ್ಮದ್ ಸವಾದ್ ’ಉತ್ತಮ ಹೊಡೆತಗಾರ’ ಆಗಿ ಪಂದ್ಯಾಟದಲ್ಲಿ ಮೆಚ್ಚುಗೆಗಳಿಸಿದರು ಎಂದು ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸೆಲಿನ್ ತಿಳಿಸಿದ್ದಾರೆ.