ಕುಂತೂರುಪದವು ಹಾ.ಉ.ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

  • 2.63 ಲಕ್ಷ ರೂ.ನಿವ್ವಳ ಲಾಭ; ಶೇ.12 ಡಿವಿಡೆಂಡ್, ಪ್ರತಿ ಲೀ.ಹಾಲಿಗೆ 42 ಪೈಸೆ ಬೋನಸ್ ಘೋಷಣೆ

ಕಡಬ: ಕುಂತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ,29ರಂದು ಕುಂತೂರುಪದವು ಸರಕಾರಿ ಹಿ.ಪ್ರಾ.ಶಾಲೆ ವಠಾರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎ.ಸೋಮಪ್ಪ ಗೌಡರವರು ಮಾತನಾಡಿ, ಸಂಘವು ರದಿ ಸಾಲಿನಲ್ಲಿ 2,63,937 ರೂ.,ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 42 ಪೈಸೆ ಬೋನಸ್ ನೀಡಲಾಗುವುದು ಎಂದು ಘೋಷಣೆ ಮಾಡಿದರು. ದ.ಕ.ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಸತೀಶ್ ರಾವ್‌ರವರು ಹೈನುಗಾರಿಕೆ ಬಗ್ಗೆ, ಜಾನುವಾರುಗಳಿಗೆ ವಿಮೆ ಮಾಡುವುದರ ಅಗತ್ಯತೆ ಬಗ್ಗೆ ವಿವರಿಸಿದರು. ವಿಸ್ತರಣಾಧಿಕಾರಿ ಯಮುನಾರವರು ಹಾಲಿನ ಗುಣಮಟ್ಟ, ಶುದ್ಧ ಹಾಲಿನ ಉತ್ಪಾದನೆ ಕುರಿತು ಮಾಹಿತಿ ನೀಡಿದರು.

 

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಸಂತ ಕೆ., ನಿರ್ದೇಶಕರಾದ ಪದ್ಮನಾಭ ಗೌಡ, ಚಂದ್ರಶೇಖರ, ರಾಮಚಂದ್ರ ಗೌಡ, ದಿನಕರ ಭಟ್, ವಿಜಯ, ಶಶಿಕಲಾ ಉಪಸ್ಥಿತರಿದ್ದರು. ಕಾರ್ಯದರ್ಶಿ ನೀಲಯ್ಯ ಗೌಡ ವರದಿ ವಾಚಿಸಿದರು. ನಿರ್ದೇಶಕ ಚಂದ್ರಶೇಖರ ಸ್ವಾಗತಿಸಿ, ಇನ್ನೋರ್ವ ನಿರ್ದೇಶಕ ದಿನಕರ ಭಟ್ ವಂದಿಸಿದರು. ಹಾಲು ಪರೀಕ್ಷಕ ಶ್ರೇಯಸ್ ಎಂ.,ಸಹಕರಿಸಿದರು. ಕುಂತೂರುಪದವು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ವಿ.ಯಂ.ತೋಮಸ್, ಕೆ.ಎಸ್.ಬಾಬು, ಮಾಜಿ ಕಾರ್ಯದರ್ಶಿಯೂ ಆದ ಕೃತಕ ಗರ್ಭಧಾರಣಾ ಕಾರ್ಯಕರ್ತ ಮಂಜಪ್ಪ ಕೆ., ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here