ರಮೇಶ್ ಬಳ್ಳರವರಿಗೆ ಶ್ರೇಷ್ಠ ಭಜನಾ ಸಾಧಕ ಪ್ರಶಸ್ತಿ – ಡಾI ಡಿ. ವೀರೇಂದ್ರ ಹೆಗ್ಗಡೆಯವರಿಂದ ಪ್ರಶಸ್ತಿ ಪ್ರದಾನ

0

ಬೆಟ್ಟಂಪಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವವನದಲ್ಲಿ ಸೆ. 16 ರಿಂದ ಸೆ. 23 ರವರೆಗೆ ನಡೆದ 24 ನೇ ವರ್ಷದ ಭಜನಾ ತರಬೇತಿ ಕಮ್ಮಟದಲ್ಲಿ ಪುತ್ತೂರು ತಾಲೂಕು ಪರಿಷತ್ತಿನಿಂದ ನೀಡಲಾಗುವ ಶ್ರೇಷ್ಠ ಭಜನಾ ಸಾಧಕ ಪ್ರಶಸ್ತಿಗೆ ಇರ್ದೆ ಕುಂಞಿ‌ಮಲೆ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿಯ ಸದಸ್ಯ ರಮೇಶ್ ಬಳ್ಳರವರು ಆಯ್ಕೆಯಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಪ್ರಶಸ್ತಿ ಸ್ವೀಕರಿಸಿದರು‌.

ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ತರಬೇತಿ ಪಡೆದು ಅನೇಕ ಭಜನಾ ತಂಡಗಳನ್ನು ರಚಿಸಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ, ಮಹಿಳೆಯರಿಗೆ ಭಜನಾ ತರಬೇತಿ ನೀಡುತ್ತಿದ್ದಾರೆ.

ಇರ್ದೆ ದೂಮಡ್ಕ ಶ್ರೀ ವಿಷ್ಣು ಮಹಿಳಾ ಭಜನಾ ಮಂಡಳಿ, ಶ್ರೀ ವಿಷ್ಣು ಮಕ್ಕಳ ಭಜನಾ ತಂಡ, ಸಿದ್ಧಿವಿನಾಯಕ ಮಹಿಳಾ ಭಜನಾ ತಂಡ ಕುಂಞಮಲೆ ದರ್ಭೆ, ಸಿದ್ಧಿವಿನಾಯಕ ಮಕ್ಕಳ ಭಜನಾ ತಂಡ,‌ ಷಣ್ಮುಖ ಭಜನಾ ತಂಡ ಬಾಳೆಮೂಲೆ, ಷಣ್ಮುಖ ಮಕ್ಕಳ ಭಜನಾ ತಂಡ ಬಾಳೆಮೂಲೆ,‌ ಶ್ರೀ ಮಹಾಮ್ಮಾಯ ಮಕ್ಕಳ ಭಜನಾ ತಂಡ ಬಳ್ಳ ಮುಂತಾದ ಭಜನಾ ತಂಡಗಳಿಗೆ ಉಚಿತ ತರಬೇತಿ ನೀಡುತ್ತಿದ್ದು ಸುಮಾರು 25 ವರ್ಷಗಳಿಂದ ಭಜನಾ ಕ್ಷೇತ್ರದಲ್ಲಿ ಸೇವೆಗೈಯುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಸಕ್ರೀಯ ಕಾರ್ಯಕರ್ತರಾಗಿರುವ ಇವರು ಕೃಷಿಯಲ್ಲಿ ತೊಡಗಿಸಿಕೊಂಡು ಹೈನುಗಾರಿಕೆ, ಮಲ್ಲಿಗೆ, ಜೇನು ಸಾಕಾಣೆ ಮಾಡುತ್ತಿದ್ದಾರೆ. ಇವರು ಇರ್ದೆ ಗ್ರಾಮದ ಕುಂಞಿಮಲೆ ಬಳ್ಳ ಈಶ್ವರ ನಾಯ್ಕ್ ಹಾಗೂ ಪ್ರೇಮ ದಂಪತಿ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here