ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ವತಿಯಿಂದ ವಿವಿಧ ವಯೋಮಾನದ ಮಕ್ಕಳಿಗೆ ವಾಲಿಬಾಲ್ ಚಾಂಪಿಯನ್ ಟ್ರೋಪಿ 2022 ರಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಅ.23 ರಂದು ಪುತ್ತೂರು ನೆಹರುನಗರ ಸುದಾನ ವಸತಿಯುತ ಶಾಲಾ ಮೈದಾನದಲ್ಲಿ ನಡೆಯಲಿದೆ.
ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಲ್ಲಿ 14,16,18 ವರ್ಷಕ್ಕೆ ಮೀರದ ಬಾಲಕ / ಬಾಲಕಿಯರನ್ನು ಸೇರಿಸಿಕೊಂಡು ಪುತ್ತೂರು ನೆಹರುನಗರ ಸುದಾನ ವಸತಿಯುತ ಶಾಲೆಯ ಮೈದಾನದಲ್ಲಿ ಉತ್ತಮ ತಾಲೂಕಿನ ಉತ್ತಮ ತಂಡವನ್ನು ರಚಿಸಿ ಜಿಲ್ಲಾ ಮಟ್ಟಕ್ಕೆ ಕಳುಹಿಸಲು ಆಯ್ಕೆ ಪ್ರಕ್ರಿಯೆ ನಡೆಸಯಲಿದೆ. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕು ವಲಯಕ್ಕೆ ಸಂಬಂಧಿಸಿ ಪ್ರಾಂಶುಪಾಲರು ಪ್ರೌಢ ಹಾಗು ಪ್ರಾಥಮಿಕ ಶಾಲಾ ಮುಖ್ಯಸ್ಥರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ತಮ್ಮ ತಮ್ಮ ವಿದ್ಯಾಸಂಸ್ಥೆಯ ಮಕ್ಕಳಿಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಅವರವರ ಜನನ ದಿನಾಂಕಕ್ಕೆ ಸಂಬಂಧಿಸಿ ಅರ್ಹತಾ ಪ್ರಮಾಣ ಪತ್ರ ಮತ್ತು ಆಧಾರ್ ಜೆರಾಕ್ಸ್ ಪ್ರತಿಯೊಂದಿಗೆ ಕಳುಹಿಸಿಕೊಡುವಂತೆ ಮತ್ತು ಆಯ್ಕೆ ಸಮಯದಲ್ಲಿ ಕ್ರೀಡಾ ಸಮವಸ್ತ್ರ ಕಡ್ಡಾಯವಾಗಿ ಧರಿಸತ್ತಕ್ಕದು ಎಂದು ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮುಖಾಂತರ ವಿನಂತಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448774197, 8748018004, 9449488080, 9448858079 ಅನ್ನು ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.