ಅಧ್ಯಕ್ಷರಾಗಿ ಅಬೂಬಕ್ಕರ್ ಮುಲಾರ್, ಕಾರ್ಯದರ್ಶಿಯಾಗಿ ಅನ್ವರ್ ಸ್ವಾದಿಕ್ ಮುಸ್ಲಿಯಾರ್, ಕೋಶಾಧಿಕಾರಿಯಾಗಿ ಅಝೀಝ್ ಕೂರ್ನಡ್ಕ ಆಯ್ಕೆ
ಪುತ್ತೂರು: ‘ಸಮಸ್ತ’ ದ ಅಧೀನದ ಕೂರ್ನಡ್ಕ ರೇಂಜ್ ಮದ್ರಸ ಮೇನೆಜ್ಮೆಂಟ್ ಅಸೋಸಿಯೇಷನ್ ಇದರ ವಾರ್ಷಿಕ ಮಹಾಸಭೆಯು ಕೂರ್ನಡ್ಕ ಕೇಂದ್ರ ಮದ್ರಸದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಹಿರಾ ಅಬ್ದುಲ್ ಖಾದರ್ ಹಾಜಿ ವಹಿಸಿದ್ದರು. ಕಾರ್ಯಕ್ರಮವನ್ನು ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಉದ್ಘಾಟಿಸಿದರು. ಮುಫತ್ತಿಷ್ ಜಿ.ಪಿ. ಮುಹಮ್ಮದ್ ದಾರಿಮಿ ಮತ್ತು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ರಶೀದ್ ದಾರಿಮಿ ಪ್ರಸ್ತಾವಿಕವಾಗಿ ಮಾತನಾಡಿದರು. ಎಂ.ಎಂ. ಅಬ್ದುಲ್ ಅಝೀಝ್ ಕೂರ್ನಡ್ಕ ಸ್ವಾಗತಿಸಿದರು. ಅನ್ವರ್ ಸ್ವಾದಿಕ್ ಮುಸ್ಲಿಯಾರ್ ವಂದಿಸಿದರು. ಮಹಾಸಭೆಯ ಚುನಾವಣಾ ಪ್ರಕ್ರಿಯೆಗೆ ಜಿಲ್ಲಾ ವೀಕ್ಷಕರಾಗಿ ದ.ಕ.ಜಿಲ್ಲಾ ಮದ್ರಸ ಮೇನೆಜ್ ಮೆಂಟ್ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ ಮತ್ತು ಮುಹಮ್ಮದ್ ಗಡಿಯಾರ್ ಆಗಮಿಸಿದ್ದರು.
ಸಭೆಯಲ್ಲಿ ಮುಂದಿನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬುಬಕ್ಕರ್ ಮುಲಾರ್, ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟೆತಡ್ಕ, ಕೋಶಾಧಿಕಾರಿಯಾಗಿ ಎಂ.ಎಂ. ಅಬ್ದುಲ್ ಅಝೀಝ್ ಉಪಾಧ್ಯಕ್ಷರಾಗಿ ಉಮ್ಮರ್ ಪಟ್ಟೆ, ಮತ್ತು ಆಲಿ ಕುಂಞ ಇಂಜಿನಿಯರ್ ಕೋರಿಂಗಿಲ, ಜೊತೆ ಕಾರ್ಯದರ್ಶಿಗಳಾಗಿ ರಫೀಕ್ ನಾಕಪ್ಪಾಡಿ ಮತ್ತು ಅಬೂಬಕ್ಕರ್ ಕರ್ಪೆ, ಜಿಲ್ಲಾ ಕೌನ್ಸಿಲರ್ಗಳಾಗಿ ಶರೀಫ್ ಮುಕ್ರಂಪಾಡಿ ಮತ್ತು ಶಾಫಿ ಪಾಪೆತ್ತಡ್ಕ ಹಾಗೂ ರೇಂಜ್ ಗೊಳಪಟ್ಟ 28 ಮದ್ರಸಗಳ ಪ್ರತಿನಿಧಿಗಳು ಕಾರ್ಯಾಕಾರಿ ಸಮಿತಿ ಸದಸ್ಯರುಗಳನ್ನಾಗಿ ನೇಮಕ ಮಾಡಲಾಯಿತು.