ಪ್ರಗತಿಪರ ಕೃಷಿಕ ಮೊದೆಲ್ಕಾಡಿ ದೇರಣ್ಣ ರೈ ಪಾಪನಡ್ಕ ನಿಧನ

0

ಪುತ್ತೂರು: ಕುಡ್ತಜೆ ದೇವಪ್ಪ ರೈ ಹಾಗೂ ಮೊದೆಲ್ಕಾಡಿ ಪರಮೇಶ್ವರಿ ರೈ ದಂಪತಿ ಪುತ್ರರಾಗಿರುವ ಪ್ರಗತಿಪರ ಕೃಷಿಕ ಮೊದೆಲ್ಕಾಡಿ ದೇರಣ್ಣ ರೈ(75ವ.) ಪಾಪನಡ್ಕರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನ.16 ರಂದು ರಾತ್ರಿ ನಿಧನ ಹೊಂದಿದ್ದಾರೆ.
ಮೃತ ಮೊದೆಲ್ಕಾಡಿ ದೇರಣ್ಣ ರೈಯವರು ಪುತ್ತೂರು ಬಂಟರ ಸಂಘದಿAದ ಉತ್ತಮ ಕೃಷಿಕ ಪ್ರಶಸ್ತಿಯ ಜೊತೆಗೆ ಚಿನ್ನದ ಪದಕ ವಿಜೇತರಾಗಿದ್ದರು. ಇರ್ದೆ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರಾಗಿ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಎನ್‌ಆರ್‌ಸಿಸಿಯಿಂದ ಉತ್ತಮ ಗೇರು ಕೃಷಿಕ ಪ್ರಶಸ್ತಿಯನ್ನು ಮೊದೆಲ್ಕಾಡಿ ದೇರಣ್ಣ ರೈಯವರು ಗಳಿಸಿಕೊಂಡಿದ್ದಾರೆ. ಜನಾನುರಾಗಿಯಾಗಿರುವ ಮೊದೆಲ್ಕಾಡಿ ದೇರಣ್ಣ ರೈಯವರು ಪತ್ನಿ ಚಿಲ್ಮೆತ್ತಾರು ಸರೋಜಿನಿ ರೈ, ಪುತ್ರರಾದ ಆಮೇರಿಕದಲ್ಲಿ ಐಟಿ ಇಂಜಿನಿಯರ್ ಆಗಿರುವ ಪ್ರೇಮ್‌ಜಿತ್ ರೈ, ಸೋಲಾರ್ ವ್ಯವಹಾರದೊಂದಿಗೆ ಕೃಷಿ ಉದ್ಯಮವನ್ನು ನೋಡಿಕೊಳ್ಳುತ್ತಿರುವ ಶ್ಯಾಮ್‌ಜಿತ್ ರೈ, sಸೊಸೆಯಂದಿರಾದ ಆಶಾ, ರಶ್ಮಿ, ಮೊಮ್ಮಕ್ಕಳು, ನಾಲ್ಕು ಮಂದಿ ಸಹೋದರರು, ಮೂವರು ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ನ.18 ರಂದು ಅಂತ್ಯಕ್ರಿಯೆ..
ಮೃತ ಮೊದೆಲ್ಕಾಡಿ ದೇರಣ್ಣ ರೈ ಪಾಪನಡ್ಕರವರ ಅಂತ್ಯಕ್ರಿಯೆಯು ನ.18 ರಂದು ಅಪರಾಹ್ನ ಮೃತರ ನಿವಾಸವಾದ ಪಾಪನಡ್ಕದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here