ಸವಣೂರು : ಗ್ರಾ.ಪಂ.ಮಟ್ಟದ ತ್ರೈಮಾಸಿಕ ಕೆ.ಡಿ.ಪಿ. ಸಭೆಗೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಕೆ.ಡಿ.ಪಿ.ಸಭೆಯನ್ನು ಮುಂದೂಡಿದ ಘಟನೆ ಸವಣೂರು ಗ್ರಾ.ಪಂ.ನಲ್ಲಿ ನಡೆಯಿತು.
ಸವಣೂರು ಗ್ರಾ.ಪಂ.ಮಟ್ಟದ ತ್ರೈಮಾಸಿಕ ಕೆ.ಡಿ.ಪಿ.ಸಭೆಯು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು.
ಸಭೆಗೆ ಶಿಕ್ಷಣ ಇಲಾಖೆಯಿಂದ ಸಿ.ಆರ್.ಪಿ.ಕುಶಾಲಪ್ಪ, ಸವಣೂರು ಪ್ರಾ.ಕೃ.ಸ.ಸಂಘದ ಸಿಇಓ ಚಂದ್ರಶೇಖರ ಪಿ., ಆರೋಗ್ಯ ಇಲಾಖೆಯಿಂದ ಸಮುದಾಯ ಆರೋಗ್ಯ ಅಧಿಕಾರಿ ಸುಷ್ಮಾ ಅವರು ಮಾತ್ರ ಆಗಮಿಸಿದ್ದರು.ಉಳಿದ ಯಾವುದೇ ಇಲಾಖೆಯವರು ಆಗಮಿಸರಿರಲಿಲ್ಲ.
ಸಭೆಯಲ್ಲಿ ಗ್ರಾ.ಪಂ.ಸದಸ್ಯರಾದ ರಫೀಕ್ ಎಂ.ಎ., ತೀರ್ಥರಾಮ ಕೆಡೆಂಜಿ,ಬಾಬು ಎನ್. ಭರತ್ ರೈ ಅವರು ಮಾತನಾಡಿ, ಅಧಿಕಾರಿಗಳು ಬಾರದೇ ಇರುವುದರಿಂದ ಪ್ರಗತಿ ಪರಿಶೀಲನೆ ನಡೆಸುವುದು ಹೇಗೆ.ಪ್ರತಿನಿತ್ಯ ಸ್ಪಂದಿಸುವ ಇಲಾಖೆಯ ಅಧಿಕಾರಿಗಳು ಮಾತ್ರ ಸಭೆಗೆ ಬಂದಿದ್ದಾರೆ.ಉಳಿದ ಅಧಿಕಾರಿಗಳು ಗೈರಾಗಿರುವುದರಿಂದ ಸಭೆಯ ಮುಂದೂಡುವಂತೆ ಒತ್ತಾಯಿಸಿದರು.
ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರು ಮಾತನಾಡಿ, ಅಧಿಕಾರಿಗಳು ಬಾರದಿರುವುದರಿಂದ ಕೆ.ಡಿ.ಪಿ.ಸಭೆಯನ್ನು ಮುಂದೂಡುತ್ತೇವೆ ಎಂದರು. ಸಭೆಗೆ 21 ಗ್ರಾ.ಪಂ.ಸದಸ್ಯರ ಪೈಕಿ 10 ಮಂದಿ ಮಾತ್ರ ಆಗಮಿಸಿದ್ದರು.
ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಗಿರಿಶಂಕರ ಸುಲಾಯ, ರಫೀಕ್ ಎಂ.ಎ.ಭರತ್ ರೈ, ತೀರ್ಥರಾಮ ಕೆಡೆಂಜಿ,ಚೆನ್ನು ,ಬಾಬು ಎನ್., ಯಶೋದಾ ,ಇಂದಿರಾ ಬೇರಿಕೆ ಪಾಲ್ಗೊಂಡಿದ್ದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮನ್ಮಥ ಎ. ಸ್ವಾಗತಿಸಿ,ದಯಾನಂದ ಮಾಲೆತ್ತಾರು ವಂದಿಸಿದರು. ಸಿಬ್ಬಂದಿಗಳಾದ ಪ್ರಮೋದ್ ಕುಮಾರ್ ರೈ,ಶಾರದಾ ,ಯತೀಶ್ ಕುಮಾರ್ ಸಹಕರಿಸಿದರು.