ಪುತ್ತೂರು: ತುಳುನಾಡಿನ ಪುರಾತನ ಕಾರಣಿಕ ಕ್ಷೇತ್ರ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಷಷ್ಠಿ ಮಹೋತ್ಸವವು ನ.26ರಿಂದ ಪ್ರಾರಂಭಗೊಂಡು ನ.30ರ ತನಕ ಪೂರ್ವಶಿಷ್ಠ ಸಂಪ್ರದಾಯದಂತೆ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ನ.26ರಂದು ಸಂಜೆ ದೇವತಾ ಪ್ರಾರ್ಥನೆ, ಸ್ವಸ್ತಿ| ಪುಣ್ಯಾಹವಾಚನ, ಪ್ರಾಸಾದಶುದ್ದಿ, ರಕ್ಷೆಘ್ನಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ನ.27 ರ ಚೌತಿಯಂದು ಶ್ರೀದೇವರಿಗೆ ಬೆಳಿಗ್ಗೆ ಪವಮಾನಾಭಿಷೇಕ, 6 ತೆಂಗಿನಕಾಯಿ ಮಹಾಗಣಪತಿ ಹೋಮ, ಬಿಂಬ ಶುದ್ಧಿ, ಪಂಚವಿಂಶತಿ ಕಲಶಪೂಜೆ, ಶ್ರೀದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ ಶ್ರೀದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಶ್ರೀರಾಮ ಭಜನಾ ಮಂಡಳಿ ಕೆಮ್ಮಿಂಜೆ ಮತ್ತು ವೈಷ್ಣವಿ ವೈದೇಹಿ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ ಶ್ರೀದೇವರಿಗೆ ಕಾರ್ತಿಕ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ನ.28ರಂದು ಆಶ್ಲೇಷ ಬಲಿ: 28ರ ಪಂಚಮಿಯಂದು ಬೆಳಿಗ್ಗೆ ಕೇತ್ರದ ನಾಗಬನದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಮತ್ತು ನಾಗತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಶ್ರೀದೇವರ ಬಲಿಹೊರಟು ಪಂಚಮಿ ಉತ್ಸವ ಪಲ್ಲಕಿ ಉತ್ಸವ ಕಟ್ಟೆಪೂಜೆ, ರಾತ್ರಿ ಶಿರಾಡಿ ದೈವದ ಕಿರುವಾಳು ಆಗಮನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
ಜಾತ್ರೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನ.28ರಂದು ಬೆಳಿಗ್ಗೆ 11.30ರಿಂದ ಶ್ರೀರಾಗ್ ಮ್ಯೂಸಿಕ್ಸ್ ಪುತ್ತೂರು ಇವರಿಂದ `ಪಂಚಮಿ ಸ್ವರಾಂಜಲಿ-2022′ ಸಂಗೀತ ರಸಮಂಜರಿ ಕಾರ್ಯಕ್ರಮ, ನ.29ರಂದು ಸಂಜೆ 5 ಗಂಟೆಯಿಂದ ಶ್ರೀದೇವಿ ಲೀಲಾಮೃತ ಮಹಿಳಾ ಯಕ್ಷ ತಂಡ ಬಾಲವನ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ನ.30ರಂದು ಬೆಳಿಗ್ಗೆ ಪಂಚವಿಂಶತಿ ಕಲಶಪೂಜೆ, ಶ್ರೀದೇವರಿಗೆ ಸೀಯಾಳಾಭಿಷೇಕ, ಸಂಪ್ರೋಕ್ಷಣಾ ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆ ಹಾಗೂ ರಂಗಪೂಜೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಂತ್ರಿ ಕೆ.ಸುಬ್ರಹ್ಮಣ್ಯ ಬಳ್ಳಕ್ಕುರಾಯ ತಿಳಿಸಿದ್ದಾರೆ.
ನ.29 ಷಷ್ಠಿ ಮಹೋತ್ಸವ
ನ.29ರ ಷಷ್ಠಿಯಂದು ಬೆಳಿಗ್ಗೆ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ಪಲ್ಲಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆದು ರಂಗಪೂಜೆ ವೈದಿಕ ಮಂತ್ರಾಕ್ಷತೆ ಹಾಗೂ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.