ಡಿ.30-ಜ.2 ಬ್ರಹ್ಮಕಲಶೋತ್ಸವ ಹಾಗೂ ಒತ್ತೆಕೋಲ
ಪುತ್ತೂರು:ಪುರಾತನ ಕಾರಣಿಕ ಕ್ಷೇತ್ರ ಮುಂಡೂರು ಗ್ರಾಮದ ಅಜಲಾಡಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ದೈವಸ್ಥಾನದ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಒತ್ತೆಕೋಲವನ್ನು ಡಿ.30ರಿಂದ ಪ್ರಾರಂಭಗೊಂಡು ಜ.2ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸುವುದಾಗಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯು ಡಿ.5ರಂದು ದೈವಸ್ಥಾನದ ಆವರಣದಲ್ಲಿ ಒತ್ತೆಕೋಲ ಸಮಿತಿ ಅಧ್ಯಕ್ಷ ಭಾಸ್ಕರ್ ಆಚಾರ್ಯ ಹಿಂದಾರ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಡಿ.30ರಂದು ಹಸಿರು ಹೊರೆಕಾಣಿಕೆ ಸಮರ್ಪಣೆಯೊಂದಿಗೆ ಬ್ರಹ್ಮಕಲಶೋತ್ಸವಗಳಿಗೆ ಚಾಲನೆ ನೀಡಲಾಗುವುದು. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾದ ದೈವದ ಮೊಗದ ಸಮರ್ಪಣೆಯು ನಡೆಯಲಿದೆ.
ಡಿ.31ರಂದು ಸೂರ್ಯೋದಯದಿಂದ ಸೂರ್ಯಾಸ್ತ ತನಕ ಅರ್ಧ ಏಕಾಹ ಭಜನೆ, ಸಂಜೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ಬಳಿಕ ಬ್ರಹ್ಮಕಲಶೋತ್ಸವದ ಧಾರ್ಮಿಕ, ವೈದಿಕ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದೆ.
ಜ.1ರಂದು ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಸಂಜೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ರಾತ್ರಿ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜ. 2ರಂದು ಬೆಳಿಗ್ಗೆ ಗಣಹೋಮ, ಸಂಜೆ ದೈವದ ಭಂಡಾರ ತೆಗೆಯುವುದು, ರಾತ್ರಿ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ಕುಲಿಚ್ಚಾಟ್, ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲ,
ಡಿ.3 ರಂದು ಗುಳಿಗ ದೈವದ ಕೋಲ ನಡೆಯಲಿದೆ. ಪ್ರತಿ ದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಒತ್ತೆಕೋಲ ಸಮಿತಿ ಅಧ್ಯಕ್ಷ ಭಾಸ್ಕರ್ ಆಚಾರ್ ಹಿಂದಾರು ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಅನಿಲ್ ಕಣ್ಣಾರ್ನೂಜಿ, ಒತ್ತೆಕೋಲ ಸಮಿತಿ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಕೋಶಾಧಿಕಾರಿ ಪಿ.ಹುಕ್ರ ಮಾಸ್ತರ್, ಈಶ್ವರ ನಾಕ ಅಜಲಾಡಿ, ಶ್ರೀಕಾಂತ್ ಆಚಾರ್ ಹಿಂದಾರ್, ಬಾಲಕೃಷ್ಣ ಶೆಟ್ಟಿ ಪಂಜಳ, ಪುರುಷೋತ್ತಮ ಬಂಗೇರ, ನೀಲಪ್ಪ ಪೂಜಾರಿ ಕುರೆಮಜಲು, ಜಯರಾಮ ಬಿ.ಎನ್, ಪ್ರವೀಣ್ ಶೆಟ್ಟಿ, ಪ್ರವೀಣ್ ಮುಲಾರು, ದೇವದಾಸ್ ಕುರಿಯ, ಬಾಲಕೃಷ್ಣ ಪೂಜಾರಿ, ಕೊರಗಪ್ಪ ನಾಯ್ಕ, ಶೀನಪ್ಪ ಪೂಜಾರಿ ಮುಲಾರು, ರಾಮ, ಮಂಜುನಾಥ, ಚೇತನ್, ಚೇತನ್ ಬೊಳ್ಳಗುಡ್ಡೆ, ಸೇಸಪ್ಪ ಶೆಟ್ಟಿ ಪನೋನಿ, ಬಾಲಚಂದ್ರ ಕಡ್ಯ, ಶೇಷಪ್ಪ ಆಚಾರಿ, ಚೆನ್ನಪ್ಪ ಗೌಡ, ಪ್ರಮೋದ್ ಗೌಡ, ಮೋಹನ್ ಸಾಲಿಯಾನ್, ರಕ್ಷಿತ್, ನವೀನ್ ಕೋಟ್ಯಾನ್, ಸುರೇಶ್ ಕೋಟ್ಯಾನ್, ಸಂದೀಪ್, ರವಿಚಂದ್ರ, ಕುಶಾಲಪ್ಪ ಗೌಡ ಕಡ್ಯ, ತಿಮ್ಮಪ್ಪ ಪೂಜಾರಿ ಕೊರುಂಗು, ಚಂದ್ರಹಾಸ ಕೊರುಂಗು, ಪ್ರಶಾಂತ್ ಪಂಜಳ, ವಿನೋದ್ ಶೆಟ್ಟಿ ಪಂಜಳ, ಸಂತೋಷ್ ಶೆಟ್ಟಿ ಪಂಜಳ ಮೊದಲಾದವರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಗಣೇಶ್ ಸುವರ್ಣ ಬೊಲ್ಲಗುಡ್ಡೆ ಸ್ವಾಗತಿಸಿ, ವಂದಿಸಿದರು.