ವಿವೇಕಾನಂದ ಕಾಲೇಜಿನ ಲಲಿತ ಕಲಾ ಸಂಘದ ಉದ್ಘಾಟನಾ ಕಾರ್ಯಕ್ರಮ

0

“ಕಲೆ ಮತ್ತು ಕಲಿಯುವಿಕೆ ಜೀವನದ ಬಹುಮುಖ್ಯ ಅಂಗ” -ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ

ಪುತ್ತೂರು.ಡಿ,15-ಕಲೆ ಎನ್ನುವಂತದ್ದು ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಬಹಳ ಸಹಾಯಕವಾದ ಅಂಶ.ನಮ್ಮಲ್ಲಿ ಅಡಗಿರುವ ಕಲೆಯನ್ನು ನಾವು ಗುರುತಿಸಿಕೊಂಡು ಅದಕ್ಕೆ ಸಮರ್ಪಕವಾದ ತರಬೇತಿಯನ್ನು ಪಡೆದುಕೊಂಡು ಅಭಿವ್ಯಕ್ತಿ ಗೊಳಿಸಲು ಅದಕ್ಕೆ ಸೂಕ್ತವಾದ ವೇದಿಕೆಯನ್ನು ನೀಡಬೇಕು.ಯಾಕೆಂದರೆ ಕಲೆ ಎನ್ನುವಂತದ್ದು ನಮ್ಮ ಜೀವನದ ಬಹುಮುಖ್ಯ ಅಂಗ.ಅದನ್ನು ವಿದ್ಯಾರ್ಥಿಗಳು ಓದಿನ ಜೊತೆಜೊತೆಗೆ ಬೆಳೆಸಿಕೊಂಡರೆ ಇನ್ನೂ ಉತ್ತಮ ಎಂದು ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಹೇಳಿದರು.


ಅವರು ಪುತ್ತೂರು ವಿವೇಕಾನಂದ ಕಾಲೇಜಿನ ಕಲಾ ,ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ) ಹಾಗೂ ಐಕ್ಯೂ ಎಸಿ ಘಟಕದ ಆಶ್ರಯದಲ್ಲಿ ನಡೆದ ಲಲಿತ ಕಲಾ ಸಂಘದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ, ನಾವು ಸಾಂಸ್ಕೃತಿಕವಾಗಿ ಮಕ್ಕಳನ್ನು ಬೆಳೆಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯ .ಸಾಂಸ್ಕೃತಿಕವಾದ ಬದುಕು ನಮ್ಮ ಜೀವನಕ್ಕೆ ಸಂತೋಷವನ್ನು ಕೊಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ , ಲಲಿತ ಕಲೆಗಳು ಭಾರತೀಯರ ಬದುಕಿನ ಬಹುಮುಖ್ಯ ಅಂಗ .ನಮ್ಮ ಬದುಕನ್ನು ರೂಪಿಸಲು ಕಲೆಗಳು ತುಂಬಾ ಸಹಾಯಕವಾಗುತ್ತದೆ. ಕಲೆಯಾಗಲಿ ಕಲಿಕೆಯಾಗಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಇದೆಲ್ಲವುಗಳನ್ನು ಸತತವಾದ ಪರಿಶ್ರಮದಿಂದ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್, ಆಡಳಿತ ಮಂಡಳಿಯ ಸದಸ್ಯೆ  ಶುಭ ಅಡಿಗ, ಲಲಿತ ಕಲಾ ಸಂಘದ ಸಂಯೋಜಕಿ ಆಂಗ್ಲ ವಿಭಾಗದ ಉಪನ್ಯಾಸಕಿ ಅಂಬಿಕಾ ಉಪಸ್ಥಿತರಿದ್ದರು. ಲಲಿತ ಕಲಾ ಸಂಘದ ವಿದ್ಯಾರ್ಥಿನಿ ಭಕ್ತಿ ಶ್ರೀಸ್ವಾಗತಿಸಿ, ವಿದ್ಯಾರ್ಥಿನಿ ಮಾನಸ ಪೈ ವಂದಿಸಿ, ವಿದ್ಯಾರ್ಥಿನಿ ಸ್ವಾತಿ .ಎಸ್. ಭಟ್ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ಲಲಿತಾ ಕಲಾ ಸಂಘದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

LEAVE A REPLY

Please enter your comment!
Please enter your name here