ಪುತ್ತೂರು : ಹೈಕೋರ್ಟ್ ನ್ಯಾಯಮೂರ್ತಿ ಬಸವರಾಜ್‌ರವರು ಶ್ರೀಕ್ಷೇತ್ರ ಹನುಮಗಿರಿಗೆ ಭೇಟಿ ನೀಡಿ ಪಂಚಮುಖಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಧರ್ಮದರ್ಶಿ ಶಿವರಾಂ ಶರ್ಮ, ನಾಗರಾಜ್ ನಡುವಡ್ಕ, ಶ್ರೀಕಾಂತ್ ಪಿ.ಎಸ್., ವಕೀಲರಾದ ಮಹೇಶ್ ಕಜೆ ಮತ್ತಿತರರು ಉಪಸ್ಥಿತರಿದ್ದರು. ನ್ಯಾಯಮೂರ್ತಿ ಬಸವರಾಜ್‌ರವರು ಮಧ್ಯಾಹ್ನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು.