ಪುತ್ತೂರು : ರಥಸಪ್ತಮಿಯ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ಜರುಗಿತು.
ಶಾಲಾ ಯೋಗ ಹಾಗೂ ಮೌಲ್ಯಶಿಕ್ಷಣ ಸಂಯೋಜಕಿ ವೀಣಾ ಸರಸ್ವತಿ ಮಾತನಾಡಿ ರಥಸಪ್ತಮಿಯು ಸಂವತ್ಸರ ಕಾಲಗಣನೆಯ ಒಂದು ಬಹುಮುಖ್ಯವಾದ ಆಚರಣೆ, ಪ್ರಪ್ರಥವಾಗಿ ಭೌತಿಕ ಪ್ರಪಂಚಕ್ಕೆ ಸೂರ್ಯ ಪ್ರಕಟವಾದ ದಿನದ ಆಚರಣೆಯೇ ರಥಸಪ್ತಮಿ.ಸೂರ್ಯ ಸಕಲ ಜೀವರಾಶಿಗಳನ್ನು ಪೋಷಣೆ ಮಾಡುವ ದೇವರಾಗಿ ಆರಾಧಿಸಲ್ಪಡುತ್ತಿದ್ದಾರೆ. ಪ್ರಕೃತಿಯ ಜೀವ – ನಿರ್ಜೀವ ವಸ್ತುಗಳಲ್ಲೂ ಕೃತಜ್ಞತಾ ಭಾವ ನಮ್ಮಲ್ಲಿರಬೇಕು. ಹಾಗಾಗಿ ನಮ್ಮ ಆರೋಗ್ಯ, ಪ್ರಜ್ಞೆ, ಬಲ ಮತ್ತು ತೇಜಸ್ಸಿಗಾಗಿ ಸೂರ್ಯ ದೇವನಿಗೆ ನಮಸ್ಕಾರಗಳನ್ನು ಸಮರ್ಪಿಸುವ ಮೂಲಕ ಕೃತಾರ್ಥರಾಗಬೇಕು ಎಂದರು.
ವೇದಿಕೆಯಲ್ಲಿ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ ಮತ್ತು ಪ್ರೌಢಶಾಲಾ ವಿಭಾಗದ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ಶಾಲಾ ಸಹಶಿಕ್ಷಕರಾದ ರಂಗಪ್ಪ,ದೈಹಿಕ ಶಿಕ್ಷಣ ಶಿಕ್ಷಕಿಹರಿಣಾಕ್ಷಿ ಹಾಗೂ ಸಹಶಿಕ್ಷಕಿ ಅನುರಾಧ ಇವರು ಕಾರ್ಯಕ್ರಮವನ್ನು ಆಯೋಜಿಸಿದರು.