ಆತೂರು: ಮರ್ ಹೂಂ ಹಾಜಿ ಅಬೂಬಕ್ಕರ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಶನ್ ಆತೂರು ಇದರ ವತಿಯಿಂದ ಹಫ್ವಾ ಕುಟುಂಬ ಸಮ್ಮಿಲನ ಕಾರ್ಯಕ್ರಮ ಹಾಜಿ ಅಬ್ದುಲ್ ರಹಿಮಾನ್ ಬಡ್ಡಮೆಯವರ ಅಧ್ಯಕ್ಷತೆಯಲ್ಲಿ ಫೆ. 26ರಂದು ಜರಗಿತು. ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ದುವಾಶೀರ್ವಚನ ನೀಡಿದರು.
ಎಂ.ಜೆ.ಎಂ. ಖತೀಬ್ ಕೆ.ಎಂ.ಎಚ್. ಫಾಝಿಲ್ ಹನೀಫಿ ಕಾರ್ಯಕ್ರಮ ಉದ್ಘಾಟಿಸಿದರು. ಉಪ್ಪಿನಂಗಡಿ ಮಾಲಿಕುದೀನಾರ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ್ `ಕೌಟುಂಬಿಕ ಬಾಧ್ಯತೆ’ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಹಫ್ವಾ ಕುಟುಂಬದ ಸದಸ್ಯರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಹಾಗೂ ಕಳೆದ ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭ: ಸಂಜೆ ಹಫ್ವಾ ಸಮಿತಿ ಅಧ್ಯಕ್ಷ ಮಹಮ್ಮದ್ ಕುಂಞಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಅತೂರು ಬದ್ರಿಯಾ ಶರೀಅತ್ ಕಾಲೇಜು ಪ್ರಾಧ್ಯಾಪಕ ಹಂಝ ಸಖಾಫಿ ಮಾತನಾಡಿದರು. ಸಮಾರಂಭದಲ್ಲಿ ಅಬ್ಬಾಸ್ ಮೈಂದಾಳ, ಉಮ್ಮರ್ ಹಾಜಿ ಚಾಪಲ್ಲ, ಖಾಲಿದ್ ನೆಟ್ಟಣ, ಝಕರಿಯಾ ಮುಸ್ಲಿಯಾರ್ ಆತೂರು, ಅಬೂಬಕ್ಕರ್ ಹಾಜಿ ಬೇನಪ್ಪು, ಯಾಕೂಬ್ ಮದನಿ ಕೊಯ್ಯೂರು, ಹಂಝ ಸಹದಿ, ಹಫ್ವಾ ಯೂತ್ ವಿಂಗ್ ಅಧ್ಯಕ್ಷ ಸೌಕತ್ ಮತ್ತಿತರರು ಉಪಸ್ಥಿತರಿದ್ದರು. ಸಿರಾಜ್ ಬಡ್ಡಮೆ ಸ್ವಾಗತಿಸಿ, ನೌಫಲ್ ಮಾಸ್ಟರ್ ವಂದಿಸಿದರು.