ಕಾಣಿಯೂರು: ಕೂರ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಸದಸ್ಯೆ ತಾರಾ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಆರತಿ ಉದ್ಘಾಟಿಸಿದರು. ಕುದ್ಮಾರು ಶಾಲಾ ಮುಖ್ಯಗುರು ಕುಶಾಲಪ್ಪ, ತಾ.ಪಂ.ಮಾಜಿ ಸದಸ್ಯೆ ಲಲಿತಾ ಈಶ್ವರ ಶುಭಹಾರೈಸಿದರು.
ಗ್ರಾ.ಪಂ. ಸದಸ್ಯೆ ಗೀತಾ ಕುವೆತ್ತೋಡಿ, ಕುದ್ಮಾರು ಸ್ತ್ರೀಶಕ್ತಿ ಗೊಂಚಲಿನ ಪ್ರತಿನಿಧಿ ಜಯಂತಿ ದೋಳ, ಮಹಿಳಾ ಮಂಡಲದ ಕಾರ್ಯದರ್ಶಿ ರಾಧಾ ಹಾಗೂ ಆಶಾಕಾರ್ಯಕರ್ತೆ, ಸ್ತ್ರಿಶಕ್ತಿ ಸಂಘದ ಸದಸ್ಯರು, ಮಹಿಳಾ ಮಂಡಲದ ಸದಸ್ಯರು, ಯುವತಿ ಮಂಡಲದ ಸದಸ್ಯರು, ಬಾಲವಿಕಾಸ ಸಮಿತಿ ಸದಸ್ಯರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದಿವ್ಯಾ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ವಸಂತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.