ನೆಲ್ಯಾಡಿ ಸೌಜನ್ಯ ಸ್ತ್ರೀಶಕ್ತಿ ಸ್ವಸಹಾಯ ಸಂಘಕ್ಕೆ ರಾಜ್ಯಮಟ್ಟದ ಅತ್ಯುತ್ತಮ ಸ್ತ್ರೀ ಶಕ್ತಿ ಸಂಘ ಪ್ರಶಸ್ತಿ

0

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟುಬೈಲು ಅಂಗನವಾಡಿಯ ಸೌಜನ್ಯ ಸ್ತ್ರೀಶಕ್ತಿ ಸ್ವಸಹಾಯ ಗುಂಪಿಗೆ ಶ್ರೀಮತಿ ಯಶೋಧರಮ್ಮ ದಾಸಪ್ಪ ಅವರ ಹೆಸರಿನಲ್ಲಿ ನೀಡುವ 2022-23ನೇ ಸಾಲಿನ ರಾಜ್ಯಮಟ್ಟದ ಮೈಸೂರು ಕಂದಾಯ ವಿಭಾಗದ ಅತ್ಯುತ್ತಮ ಸ್ತ್ರೀಶಕ್ತಿ ಸಂಘ ಪ್ರಶಸ್ತಿ ಲಭಿಸಿದೆ.

ಮಾ.8ರಂದು ಬೆಂಗಳೂರಿನ ರವೀಂದ್ರ ಕಲಾಮಂದಿರದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಸ್ತ್ರೀಶಕ್ತಿ ಸಂಘದ ಪ್ರತಿನಿಧಿಗಳಾದ ಸಂಪಾವತಿ ಹಾಗೂ ಪ್ರತಿಭಾರವರು ಪ್ರಶಸ್ತಿ ಸ್ವೀಕರಿಸಿದರು. ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಡಾ.ಅನುರಾಧಾ ಕೆ.ಎಸ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ ಉಪಸ್ಥಿತರಿದ್ದರು.

ಸೌಜನ್ಯ ಸ್ತ್ರೀ ಶಕ್ತಿ ಸಂಘದಲ್ಲಿ ಹೇಮಲತಾ ಆರ್.ಶೆಟ್ಟಿ, ಶಾಂತಿ ಎ ಡಿ.ಸೋಜ, ಪ್ರತಿಭಾ ಟಿ.ಶೆಟ್ಟಿ, ಭಾಗೀರಥಿ ಶೆಟ್ಟಿ, ಶಾಂತಮ್ಮ, ಕುಸುಮಾ ಭಂಡಾರಿ, ಯಶೋದಾ ಭಂಡಾರಿ, ಜೆಸ್ಸಿ, ಸುಶೀಲಾ ಭಂಡಾರಿ, ಶಾಂತಿ ಡಿ.ಸೋಜ, ಲಕ್ಷ್ಮಿ ಕುಂಬಾರ, ಪೂವಕ್ಕ ಕುಶಾಲಪ್ಪ ಕುಂಬಾರರವರು ಸದಸ್ಯರಾಗಿದ್ದಾರೆ.

ಸಂಘವು ಸಾಮಾಜಿಕ, ಆರ್ಥಿಕ, ಆಹಾರೋತ್ಪನ್ನ ಚಟುವಟಿಕೆ, ಉಳಿತಾಯ, ಆಂತರಿಕ ಸಾಲ, ಬ್ಯಾಂಕ್ ಸಾಲವನ್ನು ಕಾಲಕಾಲಕ್ಕೆ ಸರಿಯಗಿ ಮರುಪಾವತಿ, ಶ್ರಮದಾನ, ಬೀದಿ ನಾಟಕ, ಲಿಂಗ ತಾರತಮ್ಯ ಮತ್ತು ಮದ್ಯಪಾನ ನಿಷೇಧ ಹಾಗೂ ಜಾಥಾ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವುದನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

LEAVE A REPLY

Please enter your comment!
Please enter your name here