ಅಧ್ಯಕ್ಷ: ಲೋಕೇಶ್ ಹೆಗ್ಡೆ, ಉಪಾಧ್ಯಕ್ಷ: ಅರುಣ್ ಕುಮಾರ್ ಪುತ್ತಿಲ, ಕೋಶಾಧಿಕಾರಿ: ಪ್ರವೀಣ್ಚಂದ್ರ ಆಳ್ವ
ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಜನಜಾಗೃತಿ ಸಭೆ ಮತ್ತು ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪುತ್ತೂರು ಧರ್ಮಸ್ಥಳ ಯೋಜನಾ ಕಛೇರಿ ಸಭಾಂಗಣದಲ್ಲಿ ನಡೆಯಿತು. ತಾಲೂಕು ಜನಜಾಗೃತಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲಾ ಜನಜಾಗೃತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಆಳ್ವ ಮತ್ತು ವೇದಿಕೆಯಲ್ಲಿರುವ ಗಣ್ಯರು ಸಭೆಯನ್ನು ಉದ್ಘಾಟಿಸಿದರು.
ತಾಲೂಕು ಯೋಜನಾಧಿಕಾರಿ ಆನಂದ ಕೆ. ಜನಜಾಗೃತಿ ಕಾರ್ಯಕ್ರಮದ ವಾರ್ಷಿಕ ವರದಿಯನ್ನು ಮಂಡಿಸಿದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಜನಜಾಗೃತಿ ಕಾರ್ಯಕ್ರಮ ಮತ್ತು 2023-24 ಸಾಲಿನ ಕಾರ್ಯಕ್ರಮದ ಕ್ರಿಯಾಯೋಜನೆ ಬಗ್ಗೆ ಮಾಹಿತಿ ನೀಡಿದರು. ಶೌರ್ಯ ವಿಪತ್ತು ನಿರ್ವಹಣ ಕಾರ್ಯಕ್ರಮಕ್ಕೆ ರೂ.2 ಲಕ್ಷ ಮೌಲ್ಯದ ಸಲಕರಣೆಯನ್ನು ವಿತರಣೆ ಮಾಡಲಾಯಿತು.
ಪದಾಧಿಕಾರಿಗಳು : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕಿನ ನೂತನ ಅಧ್ಯಕ್ಷರಾಗಿ ಲೋಕೇಶ್ ಹೆಗ್ಡೆ, ಉಪಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಕೋಶಾಧಿಕಾರಿಯಾಗಿ ಪ್ರವೀಣ್ ಚಂದ್ರ ಆಳ್ವರವರನ್ನು ಆಯ್ಕೆ ಮಾಡಲಾಯಿತು. ಉಪ್ಪಿನಂಗಡಿ ವಲಯಾಧ್ಯಕ್ಷರಾಗಿ ಲೋಕೇಶ್ ಬೆತ್ತೋಡಿ, ಕುಂಬ್ರ ವಲಯಾಧ್ಯಕ್ಷರಾಗಿ ಪ್ರಕಾಶ್ಚಂದ್ರ ಕೈಕಾರ, ಕೆದಂಬಾಡಿ ವಲಯಾಧ್ಯಕ್ಷರಾಗಿ ಶ್ಯಾಮ್ ಸುಂದರ್ ರೈ, ಬೆಟ್ಟಂಪಾಡಿ ವಲಯಾಧ್ಯಕ್ಷರಾಗಿ ರವಿ ಕಟೀಲ್ತಡ್ಕ, ಬನ್ನೂರು ವಲಯಾಧ್ಯಕ್ಷರಾಗಿ ರಾಮಣ್ಣ ಗುಂಡೋಲೆ, ಪುತ್ತೂರು ವಲಯಾಧ್ಯಕ್ಷರಾಗಿ ಸತೀಶ್ ನಾಯ್ಕ್ ಪರ್ಲಡ್ಕ, ಅರಿಯಡ್ಕ ವಲಯಾಧ್ಯಕ್ಷರಾಗಿ ವಿಕ್ರಮ್ ರೈ ಸಾಂತ್ಯರವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಶ್ರೀ.ಕ್ಷೇ.ಧ.ಗ್ರಾ.ಯೋ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಹಾಗೂ ವಲಯದ ಎಲ್ಲಾ ಮೇಲ್ವಿಚಾರಕರು ಉಪಸ್ಥಿತರಿದ್ದರು.