ಪುತ್ತೂರು : 5 ವರುಷ ಮೇಲ್ಪಟ್ಟ ಮಕ್ಕಳಿಗೆ ಬೇಸಿಗೆ ಅವಧಿಯ 8 ದಿನಗಳ ಡ್ಯಾನ್ಸ್ ಹಾಗೂ ಕರಾಟೆ ತರಬೇತಿಯನ್ನು ಕಲ್ಲಾರೆ ಜೆಕೆ ಸಂಕೀರ್ಣದ ಮಳಿಗೆಯಲ್ಲಿ ಕಾರ್ಯಚರಿಸುತ್ತಿರುವ ” ದಿ ಡೊಮೀನೇಟರ್ಸ್ ಡ್ಯಾನ್ಸ್ ಸ್ಟುಡಿಯೋ ಹಾಗೂ ರಾಜ್ ಡ್ಯಾನ್ಸ್ ಕ್ರಿಯೇಷನ್ಸ್ ಪುತ್ತೂರು ಇದರ ವತಿಯಿಂದ ,ನುರಿತ ತರಬೇತುದಾರರ ಮೂಲಕ ತರಬೇತಿ ನೀಡುವ ಕಾರ್ಯಕ್ಕೆ , ಏ.8 ರಂದು ಜೆಕೆ ಸಂಕೀರ್ಣ ಮಳಿಗೆಯಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ತರಬೇತಿ ಆಯೋಜನೆ ಮಾಡಿದ ಸಂಘಟಕರು ತರಬೇತಿ ಪಡೆಯಲು ಆಗಮಿಸಿದ ಪುಟಾಣಿಗಳಿಂದಲೇ ,ದೀಪ ಪ್ರಜ್ವಲನೆ ಮೂಲಕ ತರಗತಿಯ ಉದ್ಘಾಟನೆಯನ್ನು ನೆರವೇರಿಸಿದರು.
ಬ್ಲ್ಯಾಕ್ ಬೆಲ್ಟ್ ಸೆವೆಂಥ್ ಡೆನ್ ,ಇನ್ಸ್ಟ್ರಕ್ಟರ್ ಅಂತರಾಷ್ಟ್ರೀಯ ಕರಾಟೆ ರೆಫೆರೀ ರೆಂಶೀ ಎಂ ಸುರೇಶ್ ಮಾತನಾಡಿ , ಮಕ್ಕಳು ಬೇಸಿಗೆ ರಜೆಯ ಲಾಭ ಪಡೆಯಲು ಇತಂಹ ತರಬೇತಿಯನ್ನು ಆರಂಭಿಸಿರುವಂಥದ್ದು ,ಮಕ್ಕಳಲ್ಲಿ ಹೆಚ್ಚು ಆತ್ಮವಿಶ್ವಾಸ ,ಧೈರ್ಯ ಹುಟ್ಟುಹಾಕಲು ಸಹಕಾರಿಯಾಗಿದೆ. ಇಂದಿನಿಂದ ತರಬೇತಿ ಪ್ರಾರಂಭಗೊಂಡಿದ್ದು , ಆಸಕ್ತರಿಗೆ ಇನ್ನು ಮುಂದೆಯೂ ತರಗತಿ ಸೇರಲು ಅವಕಾಶವಿದೆ. ಈಗ ನೋಂದಾವಣೆ ಮಾಡಿರುವಂಥ ಮಕ್ಕಳು ,ಮುಂದಿನ ದಿನಗಳಲ್ಲಿ ನಡೆಯುವ ದೈನಂದಿನ ತರಗತಿಯ ಪ್ರವೇಶ ಶುಲ್ಕ ರೂ.800 ರಿಂದ ವಿನಾಯಿತಿ ಪಡೆಯಲಿದ್ದಾರೆ ಹಾಗು ಮಾಸಿಕ ತರಬೇತಿ ಶುಲ್ಕ ರೂ.400 ಮಾತ್ರ ಪಾವತಿ ಮಾಡಿದರೆ ಸಾಕು ಎಂದು ತರಬೇತಿಯ ಕುರಿತಾಗಿ ಮಾತನಾಡಿ, ಶುಭ ಹಾರೈಸಿದರು.
ಡೊಮಿನೇಟರ್ಸ್ ಡ್ಯಾನ್ಸ್ ಸ್ಟುಡಿಯೋ ಇದರ ಕೊರಿಯೋಗ್ರಾಫರ್ ನಿತಿನ್ ಪೂಜಾರಿ , ರಾಜ್ ಡ್ಯಾನ್ಸ್ ಕ್ರಿಯೇಷನ್ಸ್ ನ ಶ್ರೀನಿ ಆಚಾರ್ಯ , ಡ್ಯಾನ್ಸ್ ಟು ಡ್ಯಾನ್ಸ್ ಕೊರಿಯೋಗ್ರಾಫರ್ ತೀಕ್ಷಾನ್ ಆಚಾರ್ಯ ,ಮಕ್ಕಳೂ ಮತ್ತು ಪೋಷಕರು ಉಪಸ್ಥಿತರಿದ್ದರು.
ಆರಂಭದಲ್ಲೇ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ ಮಕ್ಕಳು.
8 ದಿನಗಳಲ್ಲಿ ,ಡ್ಯಾನ್ಸ್ ,ಕರಾಟೆ ತರಬೇತಿ.
ನುರಿತ ತಂಡದಿಂದ ತರಬೇತಿ.
ಮಾಹಿತಿಗಾಗಿ –9740760873