ಜನಮೆಚ್ಚುಗೆಯ ಶ್ರೀ ಮಹಾಲಕ್ಷ್ಮೀ ಗ್ಲಾಸ್ ಆಂಡ್ ಪ್ಲೈವುಡ್‌ಗೆ 36ರ ಸಂಭ್ರಮ; ಪ್ಲೈವುಡ್, ಸನ್‌ಮೈಕಾ ಶೀಟ್, ಹಾರ್ಡ್‌ವೇರ್ ಐಟಂಗಳ ಅಧಿಕೃತ ಮಾರಾಟ ಸಂಸ್ಥೆ

0

ಪುತ್ತೂರು: ಪುತ್ತೂರಿನ ಅರುಣಾ ಚಿತ್ರಮಂದಿರದ ಬಳಿ ಇರುವ ಶ್ರೀ ಮಹಾಲಕ್ಷ್ಮೀ ಗ್ಲಾಸ್ ಆಂಡ್ ಪ್ಲೈವುಡ್ ಸಂಸ್ಥೆಯ ಬಗ್ಗೆ ಕೇಳದವರು ಯಾರೂ ಇರಲಿಕ್ಕಿಲ್ಲ ಏಕೆಂದರೆ ಕಳೆದ 36 ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಈ ಸಂಸ್ಥೆ ಇದೀಗ ಸಂಪೂರ್ಣ ನವೀಕರಣಗೊಂಡು ಗ್ರಾಹಕರ ಸೇವೆಗೆ ಸಜ್ಜುಗೊಂಡಿದೆ. ಬ್ರಾಂಡೆಡ್ ಕಂಪೆನಿಗಳ ಪ್ಲೈವುಡ್, ಸನ್‌ಮೈಕಾ ಶೀಟುಗಳು, ಹಾರ್ಡ್‌ವೇರ್ ಐಟಂಗಳ ಅಧಿಕೃತ ಮಾರಾಟ ಸಂಸ್ಥೆಯಾಗಿರುವ ಶ್ರೀ ಮಹಾಲಕ್ಷ್ಮೀ ಗ್ಲಾಸ್ ಆಂಡ್ ಪ್ಲೈವುಡ್ ಸಂಸ್ಥೆಯು ಉತ್ತಮ ಗುಣಮಟ್ಟ ಮತ್ತು ಗ್ರಾಹಕರಿಗೆ ಕೈಗೆಟಕುವ ದರಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು 36 ರ ಸಂಭ್ರಮಕ್ಕೆ ಸ್ಪರ್ಧ್ಮಾತ್ಮಕ ದರದಲ್ಲಿ ಐಟಮ್‌ಗಳನ್ನು ನೀಡುತ್ತಿದೆ.
ಸಂಪೂರ್ಣ ನವೀಕರಣಗೊಂಡು ಗ್ರಾಹಕರ ಸೇವೆಗೆ ಸಿದ್ಧ.

ಶ್ರೀ ಮಹಾಲಕ್ಷ್ಮೀ ಗ್ಲಾಸ್ ಆಂಡ್ ಪ್ಲೈವುಡ್ ಸಂಸ್ಥೆಯು 1988 ರಲ್ಲಿ ಪುತ್ತೂರಿನ ಬೊಳುವಾರಿನಲ್ಲಿ ಆರಂಭಗೊಂಡಿತ್ತು ಬಳಿಕ 1990 ರಲ್ಲಿ ಬೊಳುವಾರ್‌ನಿಂದ ಸ್ಥಳಾಂತರಗೊಂಡು ಪುತ್ತೂರು ಅರುಣಾ ಚಿತ್ರಮಂದಿರದ ಬಳಿಯಲ್ಲಿ ಆರಂಭಗೊಂಡಿತು. ಇದೀಗ 35 ವರ್ಷಗಳ ಬಳಿಕ 2023 ರಲ್ಲಿ ಸಂಪೂರ್ಣ ನವೀಕರಣಗೊಂಡು ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆಯನ್ನು ನೀಡಲು ಸಜ್ಜುಗೊಂಡಿದೆ.

ಏನೆಲ್ಲಾ ಇದೆ:
ಶ್ರೀ ಮಹಾಲಕ್ಷ್ಮೀ ಗ್ಲಾಸ್ ಆಂಡ್ ಪ್ಲೈವುಡ್ ಸಂಸ್ಥೆಯು ಬ್ರಾಂಡೆಡ್ ಕಂಪೆನಿಗಳ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಮುಖ್ಯವಾಗಿ ಪ್ಲೈವುಡ್, ಸನ್‌ಮೈಕಾ ಶೀಟುಗಳು, ಹಾರ್ಡ್‌ವೇರ್, ಹಿತ್ತಾಳೆ ಮತ್ತು ಸ್ಟೀಲ್‌ನ ಹಾರ್ಡ್‌ವೇರ್ ಐಟಮ್‌ಗಳು ಲಭ್ಯವಿದೆ. ಮನೆಯ ಇಂಟೀರಿಯರ್ ಡೆಕೋರೇಷನ್‌ಗೆ ಮತ್ತಷ್ಟು ಮೆರುಗು ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆ ಗ್ರಾಹಕರಿಗೆ ಸೇವೆ ನೀಡುತ್ತಿದೆ. 30 ವರ್ಷಗಳ ವಾರಂಟಿಯ, ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾದ ಎವೆರ್‌ಟೆಕ್ ಪ್ಲೈ ಕಂಪೆನಿಯ ಪ್ಲೈವುಡ್‌ಗಳು, ಹಾರ್ಡ್‌ವೇರ್ ಮತ್ತು ಫಿಟ್ಟಿಂಗ್ಸ್‌ಗಳು, ಸ್ಲೀಕ್ ಕಂಪೆನಿಯ ಕಿಚನ್ ಐಟಮ್‌ಗಳು, ಏಷಿಯನ್ ಪೈಂಟ್ಸ್, ಕ್ರಿಶು ಕಂಪೆನಿಯ ಹಿತ್ತಾಳೆ ಮತ್ತು ಸ್ಟೀಲ್ ಹಾರ್ಡ್‌ವೇರ್‌ಗಳು, ಇದಲ್ಲದೆ ಬಾಗಿಲು, ಕಿಟಕಿಗಳಿಗೆ ಸಂಬಂಧಪಟ್ಟಂತಹ ವಿವಿಧ ವಿನ್ಯಾಸದ ಬ್ರಾಂಡೆಡ್ ಕಂಪೆನಿಯ ಸ್ಟೀಲ್ ಮತ್ತು ಹಿತ್ತಾಳೆಯ ಹಾರ್ಡ್‌ವೇರ್‌ಗಳು ಲಭ್ಯವಿದೆ. ಅದರಲ್ಲಿ ಮುಖ್ಯವಾಗಿ ಬ್ರೇಸ್ ಹ್ಯಾಂಡ್ಲ್ಸ್ ಮತ್ತು ಹಾರ್ಡ್‌ವೇರ‍್ಸ್, ಸ್ಟೀಲ್ ಹ್ಯಾಂಡ್‌ಲ್ ಮತ್ತು ಹಾರ್ಡ್‌ವೇರ‍್ಸ್, ಬ್ರೇಸ್ ಮತ್ತು ಸ್ಟೀಲ್ ಜುಲಾ ಫಿಟ್ಟಿಂಗ್ಸ್, ಲಾಕರ‍್ಸ್ ಮತ್ತು ಬಯೋಮೆಟ್ರಿಕ್ ಲಾಕ್ಸ್, ಕ್ಯಾಬಿನೆಟ್ ಮತ್ತು ಪ್ರೊಪೈಲ್ ಹ್ಯಾಡ್ಲ್‌ಸ್ ಸೇರಿದಂತೆ ಎಲ್ಲಾ ಬಗೆಯ ಐಟಮ್‌ಗಳು ಹಾಗೆಯೇ ಪ್ರಭಾತ್ ಡೋರ‍್ಸ್, -ಫ್ಲಶ್ ಡೋರ‍್ಸ್, ಪಿವಿಸಿ ಡೋರ‍್ಸ್, ಲಮಿನೇಟ್ ಡೋರ‍್ಸ್, ಮೆಮ್‌ಬ್ರೇನ್ ಡೋರ‍್ಸ್, ಇದಲ್ಲದೆ ಸ್ಯಾಟಿನ್ ಪ್ಲೈ ಕಂಪೆನಿಯ ಲ್ಯಾಮಿನೇಟ್ಸ್, ಡಬ್ಲ್ಯೂಪಿಸಿ/ಪಿವಿಸಿ ಶೀಟ್ಸ್ ಸೇರಿದಂತೆ ಹಲವು ಉತ್ಪನ್ನಗಳು ಸೇರಿದಂತೆ ಹಲವು ಐಟಮ್‌ಗಳು ಲಭ್ಯವಿದೆ.

ಉತ್ತಮ ಗುಣಮಟ್ಟ ಮಿತ ದರ:
ಶ್ರೀ ಮಹಾಲಕ್ಷ್ಮೀ ಗ್ಲಾಸ್ ಆಂಡ್ ಪ್ಲೈವುಡ್‌ನ ಮುಖ್ಯ ಧ್ಯೇಯವೇ ಉತ್ತಮ ಗುಣಮಟ್ಟ ಮತ್ತು ಮಿತ ದರ ಆಗಿದೆ. ಉತ್ತಮ ಗುಣಮಟ್ಟದ ವಸ್ತುಗಳನ್ನು ಮಿತ‌ ದರದಲ್ಲಿ ಅಂದರೆ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಪೂರೈಸುವುದೇ ಸಂಸ್ಥೆಯ ವೈಶಿಷ್ಟ್ಯವಾಗಿದ್ದು ನಮಗೆ ಪುತ್ತೂರಿನಲ್ಲಿ ಯಾವುದೇ ಬೇರೆ ಶಾಖೆಗಳು ಇರುವುದಿಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕರೆ ಮಾಡಿ: ಹೆಚ್ಚಿನ ಮಾಹಿತಿ ಅಥವಾ ಐಟಮ್‌ಗಳ ಬುಕ್ಕಿಂಗ್‌ಗಾಗಿ ಮೊ.9900874072 ಗೆ ಕರೆ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here