




ಪುತ್ತೂರು: ಯಾರು ನಮ್ಮ ಕಾರ್ಯಕರ್ತರ ಮೇಲೆ ಅಮಾನುಷವಾಗಿ ದೌರ್ಜನ್ಯವೆಸಗಿದ್ದಾರೋ ಅವರನ್ನ ಸಸ್ಪೆಂಡ್ ಮಾಡಿ ಇದರಲ್ಲಿ ರಾಜಕೀಯ ಬೇಡ, ನ್ಯಾಯ ಕೊಡಿಸಿ ಎಂದು ಬಿಜೆಪಿ ಮುಖಂಡ ಕಿಶೋರ್ ಬೊಟ್ಯಾಡಿ ಅವರು ತಿಳಿಸಿದ್ದಾರೆ.




ಅವರು ಗಾಯಾಳು ಹಿಂ ಕಾರ್ಯಕರ್ತರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಮಾದ್ಯಮದ ಜೊತೆ ಮಾತನಾಡಿದರು. ಯಾರು ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯವಾಗಿದ್ಯೋ ಅವೆರೆಲ್ಲ ನಮ್ಮವರು. ತಕ್ಷಣ ಅಮಾನುಷವಾಗಿ ವರ್ತಿಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹಿಂದೂ ಸಮಾಜದಿಂದ ಹೋರಾಟ ಮಾಡಲಾಗುವುದು. ಅಗತ್ಯ ಬಿದ್ದಲ್ಲಿ ಪೊಲೀಸ್ ಸ್ಟೇಷನ್ ಬಳಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.












