ಪುತ್ತೂರುನಲ್ಲಿ ಏರ್‌ಟೆಲ್ ಡಿಟಿಹೆಚ್ ಮೀಟ್

0

ಪುತ್ತೂರು: ಏರ್‌ಟೆಲ್ ರಿಟೈಲರ್‍ಸ್, ದೋಸ್ತ್ ಮತ್ತು ಫ್ರೀಲ್ಯಾನ್ಸರ್‍ಸ್ ಮೀಟ್ ಏರ್‌ಟೆಲ್ ಡಿಟಿಹೆಚ್ ಮೀಟ್-2023 ಜು.8ರಂದು ಪುತ್ತೂರು ಸೈನಿಕ ಭವನದಲ್ಲಿ ನಡೆಯಿತು.

ಪುತ್ತೂರು, ಕಡಬದ ವಿತರಕರಾಗಿರುವ ದುರ್ಗಾಶ್ರೀ ಎಂಟರ್‌ಪ್ರೈಸಸ್ ಮತ್ತು ಸುಳ್ಯದ ವಿತರಕ ದೀಪಕ್ ಎಂಟರ್‌ಪ್ರೈಸಸ್ ವತಿಯಿಂದ ನಡೆದ ಏರ್‌ಟೆಲ್ ಡಿಟಿಎಚ್ ಮೀಟ್‌ನಲ್ಲಿ ಎಲ್ಲಾ ಟೆಕ್ನಿಷಿಯನ್‌ಗಳ ಪರವಾಗಿ ಹರೀಶ್ ಕಡಬ, ಅರುಣ್ ಮಾಣಿ, ಶ್ರೀರಾಮ್ ಭಟ್ ಕಬಕ ಮತ್ತು ಸತೀಶ್ ಕಲ್ಲುಗುಂಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಏರ್‌ಟೆಲ್ ಡಿಟಿಎಚ್ ಕೆಕೆ2 ನ ಕ್ಲಸ್ಟರ್ ಮ್ಯಾನೇಜರ್ ಗುರುರಾಜ್ ಎಸ್.ರವರು ಮಾತನಾಡಿ ಏರ್ಟೆಲ್ ಡಿಟಿಎಚ್ ಕಂಪೆನಿಯ ವತಿಯಿಂದ ಡಿಟಿಎಚ್ ಟೆಕ್ನೀಷಿಯನ್‌ಗಳಿಗೆ ಉಚಿತವಾಗಿ ದೊರೆಯುವ ಇನ್ಶೂರೆನ್ಸ್ ಮತ್ತು ಇತರ ಸೌಲಭ್ಯಗಳ ಮಾಹಿತಿ ನೀಡಿದರು. 2022-23ರಲ್ಲಿ ಕರ್ನಾಟಕದಲ್ಲಿ ಎಕ್ವಿಸಿಷನ್ ಕ್ವಾಲಿಟಿಯಲ್ಲಿ ಟಾಪರ್ ಎವಾರ್ಡ್ ಪಡೆಯಲು ಸಹಕರಿಸಿದ ಎಲ್ಲಾ ರಿಟೇಲರ್, ದೋಸ್ತ್ ಮತ್ತು ಫ್ರೀಲ್ಯಾನ್ಸರ್‌ಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಮಾರಾಟ ಮತ್ತು ಸೇವಾ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಉಪ್ಪಿನಂಗಡಿಯ ಎಲೆಕ್ಟ್ರಾನಿಕ್ಸ್, ದರ್ಶನ್ ವಿಟ್ಲ, ಸುನಿಲ್ ಗಡಾಜೆ ಮತ್ತು ಕೃಷ್ಣ ಬೆಳ್ಳಾರೆ ಇವರನ್ನು ಸನ್ಮಾನಿಸಲಾಯಿತು. ಭಾಗವಹಿಸಿದ ಎಲ್ಲಾ ಟೆಕ್ನಿಷಿಯನ್‌ಗಳಿಗೆ ಸ್ಮರಣಿಕೆ ಮತ್ತು ಸರ್ಟಿಫಿಕೇಟ್ ನೀಡಿ ಅಭಿನಂದಿಸಲಾಯಿತು. ದುರ್ಗಾಶ್ರೀ ಎಂಟರ್‌ಪ್ರೈಸಸ್ ಮಾಲಕ ನಾಗೇಶ್ ಬಲ್ನಾಡು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಸ್ಥೆ ಕಳೆದ 12 ವರ್ಷಗಳಿಂದ ಏರ್ಟೆಲ್ ಡಿಟಿಎಚ್ ಮಾರಾಟ ಮತ್ತು ಸೇವೆಯಲ್ಲಿ ಪ್ರಾಮಾಣಿಕವಾಗಿ ವ್ಯವಹಾರ ಮಾಡಿದಕ್ಕೆ ಪ್ರಶಸ್ತಿ ದೊರಕಿದ್ದು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ದೀಪಕ್ ಎಂಟರ್‌ಪ್ರೈಸಸ್ ಮಾಲಕ ದೀಪಕ್ ಕುಮಾರ್ ಪಿ.ಕೆ. ಧನ್ಯವಾದ ಸಮರ್ಪಿಸಿದರು.ಎಫ್.ಎಸ್.ಇ.ಸಿಮಾಮ್ ಡಿ’ಸೋಜ ಬಲ್ನಾಡ್, ಎಫ್‌ಎಸ್‌ಇ ಪ್ರದೀಪ್ ಎಸ್, ಟೀಮ್ ಲೀಡರ್ ವಿಜಯ್, ಡೆಮೋಸ್ಟ್ರೇಟರ್ ಮನೋಹರ್, ಶಿಲ್ಪಾ ಸಾಲ್ಯಾನ್, ಅರುಣ್ ಬಲ್ನಾಡು, ಚಿದಾನಂದ(ನಂದನ್), ಅಕ್ಷತಾ ಸಹಕರಿಸಿದರು. ಶಿವತೇಜ್ ಬಲ್ನಾಡು ಪ್ರಾರ್ಥಿಸಿದರು.ಬಾಲಕೃಷ್ಣ ಪೂಜಾರಿ ಪಲ್ಲತ್ತಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here