ಪುಣಚ ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳದ ರಂಗಪ್ರವೇಶ

0

ಪುಣಚ: ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳ ಪುಣಚ ಇದರ ರಂಗಪ್ರವೇಶವು ಜು.13ರಂದು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರು ದೀಪ ಬೆಳಗಿಸಿ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.


ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಅಡಳಿತ ಸಮಿತಿಯ ಅಧ್ಯಕ್ಷ ಎಸ್ ಆರ್ ರಂಗಮೂರ್ತಿ ಮಾತನಾಡಿ ಕ್ಷೇತ್ರದಲ್ಲಿ ಬ್ರಹ್ಮಕಲಶ ನಡೆದು ಕೆಲವೇ ತಿಂಗಳಲ್ಲಿ ದೇವಿಯ ಅದ್ಬುತ ಶಕ್ತಿಯು ಉದ್ದೀಪನಗೊಂಡಿದೆ. ಸಿಂಗಾರಿ ಮೇಳದಲ್ಲಿರುವ ಯುವಕರ ತಂಡವು ನಿಷ್ಠೆ, ಪ್ರಾಮಾಣಿಕತೆ ಹಾಗೂ ಯುವಕರ ಪರಿಶ್ರಮಕ್ಕೆ ದೇವಿಯು ಅನುಗ್ರಹದಿಂದ ಅಭೂತಪೂರ್ವ ಯಶಸ್ಸು ಗಳಿಸುವಂತಾಗಲಿ. ಸಿಂಗಾರಿ ಮೇಳದ ಯುವಕರ ತಂಡ ಶ್ರಮದಾನ, ಶುಚಿತ್ವ ಸೇರಿದಂತೆ ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರತಿ ಮನೆಯಿಂದಲೂ ಆದಷ್ಟು ಮಂದಿ ಕ್ಷೇತ್ರಕ್ಕೆ ಭೇಟಿ ನೀಡುವಲ್ಲಿ ನಾವುಗಳು ಭಾಗಿಯಾಗಬೇಕು ಎಂದು ಹೇಳಿ  ಕೃತಜ್ಞತೆ ಸಲ್ಲಿಸಿದರು.


ಮುಖ್ಯ ಅತಿಥಿಗಳಾದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ,  ಸದಸ್ಯರಾದ  ಹರ್ಷ ಎ.ಎಸ್, ಉದಯ ಕುಮಾರ್ ದಂಬೆ, ಪುಣಚ  ಗ್ರಾಂ.ಪಂ ಅಧ್ಯಕ್ಷ ರಾಮಕೃಷ್ಣ ಬಿ, ಬಾಳಿಲ ಪ್ರೌಢ ಶಾಲಾ ಅಧ್ಯಾಪಕ ಲೋಕೇಶ್ ಬೆಳ್ಳಿಗೆ, ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಕೋಶಾಧಿಕಾರಿ ಶಂಕರನಾರಾಯಣ ಭಟ್ಟ್ ಮಲ್ಯ, ಸದಸ್ಯ ರವಿಶಂಕರ ಶಾಸ್ತ್ರಿ ಮಣಿಲ, ಸಿಂಗಾರಿ ಮೇಳದ ಮುಖ್ಯ ಗುರು ಚಂದ್ರಹಾಸ ಮಣಿಯಾಣಿ ಅಗಲ್ಪಾಡಿ ಹಾಗೂ ಮೇಳದ ಕಿರಣ್‌ರಾಜ್ ಕೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಗೌರವಾರ್ಪಣೆ :
ಸಿಂಗಾರಿ ಮೇಳದ ಮುಖ್ಯ ಗುರುಗಳಾದ ಚಂದ್ರಹಾಸ ಮಣಿಯಾಣಿ ಅಗಲ್ಪಾಡಿ, ಲೋಕೇಶ್ ಬೆಳ್ಳಿಗೆ, ಆದರ್ಶ್, ಪ್ರವೀಣ್, ವಸಂತ್ ಹಾಗೂ ಮೇಳದ ಮುಖ್ಯಸ್ಥ ಲೋಹಿತ್ ಯುವರುಗಳನ್ನು ಗುರುಕಾಣಿಕೆ,  ಸ್ಮರಣಿಕೆ ನೀಡಿ ಗೌರವಿಸಲಾಯಿತು. 
ಜಯಲಕ್ಷ್ಮಿ ಪ್ರಾರ್ಥಿಸಿದರು. ರೇಷ್ಮಾ ಸ್ವಾಗತಿಸಿ, ಜಗನ್ನಾಥ ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮ ಬಳಿಕ ಚೆಂಡೆವಾದನ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. 

LEAVE A REPLY

Please enter your comment!
Please enter your name here