ಆಲಂಕಾರು: ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆಯವರ ಅಧ್ಯಕ್ಷತೆಯಲ್ಲಿ ಸೀಮೆಯ ಭಕ್ತಾದಿಗಳ ಸಭೆ ದೇವಸ್ಥಾನ ದ ಸಭಾಂಗಣದಲ್ಲಿ ನಡೆಯಿತು.
ಶ್ರೀ ಕ್ಷೇತ್ರದಲ್ಲಿ ಅಷ್ಟ ಮಂಗಲ ಪ್ರಶ್ನೆ ನಡೆದು ಇದೀಗ ಪರಿಹಾರ ಹಾಗು ಪ್ರಾಯಶ್ಚಿತ್ತ ಕಾರ್ಯಕ್ರಮಗಳು ನಡೆಯುತ್ತಿದ್ದು.ಜು.24ರಿಂದ ಅ.1 ರ ತನಕ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪರಿಹಾರ ಕಾರ್ಯಕ್ರಮ ನಡೆಯಲಿದ್ದು ಈ ಹಿನ್ನಲೆಯಲ್ಲಿ ಭಕ್ತಾಧಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆರವರು ಶ್ರೀ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ ಹಾಗು ಪರಿಹಾರ ಕಾರ್ಯಕ್ಕೆ ನಡೆದ ಜಮೆ ಮತ್ತು ಖರ್ಚಿನ ವಿವರವನ್ನು ತಿಳಿಸಿ ಸಹಕರಿಸಿದವರಿಗೆಲ್ಲಾ ಅಭಿನಂದನೆ ಸಲ್ಲಿಸಿದರು. ಜು.24 ರಿಂದ ಆ.1 ರ ತನಕ ನಡೆಯುವ ವಿವಿಧ ಧಾರ್ಮಿಕ ವಿಧಿ ವಿಧಾನ ಗಳಿಗೆ ಭಕ್ತಾದಿಗಳು ತನು,ಮನ,ಧನಗಳಿಂದ ಸಹಕರಿಸುವಂತೆ ವಿನಂತಿಸಿದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದೇವಸ್ಥಾನದ ಆರ್ಚಕರಾದ ರಾಘವೇಂದ್ರ ಪ್ರಸಾದ್ ತೋಟಂತಿಲ ಪ್ರಾರ್ಥಿಸಿ,ಶೀನಪ್ಪ ಕುಂಭಾರ ಧನ್ಯವಾದ ಸಮರ್ಪಿಸಿದರು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ ,ಪೂವಪ್ಪ ನಾಯ್ಕ್ ಎಸ್ ಹಾಗು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಬೈಲುವಾರು ಸಮಿತಿಯ ಪದಾಧಿಕಾರಿಗಳು ಹಾಗು ಭಕ್ತಾಧಿಗಳು ಸಭೆಯಲ್ಲಿ ವಿವಿಧ. ಸಲಹೆ ಸೂಚನೆ ನೀಡಿದರು. ಸಭೆ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಲಕ್ಷ್ಮೀ ನಾರಾಯಣ ಅಡೀಲು,ಮಂಜುಳಾ ಚಂದ್ರಶೇಖರ್ ಕಲ್ಲೇರಿ ,ಬಾಬು ಮರುವಂತಿಲ,ಪ್ರಶಾಂತ ರೈ. ಜಿ. ಸೇರಿದಂತೆ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರು ಉಪಸ್ಥಿತರಿದ್ದರು.ದೇವಸ್ಥಾನದ ಸಿಬ್ಬಂದಿ ಗಳು ಸಹಕರಿಸಿದರು.