ಬಡಗನ್ನೂರು: ಪಡುಮಲೆ ಬದಿನಾರು ಶ್ರೀ ಪೂಮಾಣಿ-ಕಿನ್ನಿಮಾಣಿ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಶ್ರೀ ವ್ಯಾಘ್ರ ಚಾಮುಂಡಿ ದೈವದ “ಪುದ್ವಾರ್ ಮೆಚ್ಚಿ”(ನವಾನ್ನ ಪ್ರಸಾದ) ನೇಮೋತ್ಸವ ಅ.17 ರಂದು ಶ್ರೀಸನ್ನಿಧಿಯಲ್ಲಿ ನಡೆಯಲಿರುವುದು.
ಕಾರ್ಯಕ್ರಮಗಳು
ಅ.17 ರಂದು ಪೂರ್ವಾಹ್ನ 9.30ಕ್ಕೆ ಗಣಪತಿ ಹೋಮ, 9-30ಕ್ಕೆ ನವಕಾಭಿಷೇಕ, 10ರಿಂದ ಉಳ್ಳಾಕುಲು, ವ್ಯಾಘ್ರ ಚಾಮುಂಡಿ ಹಾಗೂ ಗುಳಿಗ ದೈವಗಳಿಗೆ ತಂಬಿಲ ಸೇವೆ. 11ರಿಂದ ವ್ಯಾಘ್ರಚಾಮುಂಡಿ ದೈವದ ಪುದ್ವಾರ್ ಮೆಚ್ಚಿ (ನವಾನ್ನ ಪ್ರಸಾದ) ನೇಮೋತ್ಸವ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.