ಪುತ್ತೂರು: ಆದಿತ್ಯವಾರ ಸುರಿದ ಭಾರಿ ಮಳೆಗೆ ಪೆರ್ನೆ ಕಾರ್ಲ ಸೋಮಪ್ಪ ಮೂಲ್ಯರವರ ಮನೆಗೆ ಮೇಲ್ಗಡೆ ಮನೆಯ ಕಂಪೌಂಡು ಕುಸಿದು ಬಿದ್ದಿರುತ್ತದೆ.
ಮನೆಯ ಹಿಂಬದಿ ನೀರು ಹರಿದು ಹೋಗಲು ಸೂಕ್ತ ಚರಂಡಿಯ ವ್ಯವಸ್ಥೆ ಇಲ್ಲದಿರುವುದರಿಂದ ಕಂಪೌಂಡ್ ಗೋಡೆ ಜರಿದು ಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ದ್ವಿಚಕ್ರ ವಾಹನವೊಂದು ಜಖಂಗೊಂಡಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬನ್ನೂರು ಕಾಂಗ್ರೆಸ್ ಬೂತ್ ಸಕ್ರಿಯ ಕಾರ್ಯಕರ್ತರಾದ ಮೆಲ್ವಿನ್ ಮಸ್ಕರೇನ್ಹಸ್, ರವಿ, ಸುಬ್ರಹ್ಮಣ್ಯರವರು ಭೇಟಿ ನೀಡಿ ಮಾಧ್ಯಮಕ್ಕೆ ಮಾಹಿತಿ ನೀಡಿರುತ್ತಾರೆ.