ಓಂತ್ರಡ್ಕ ಸರ್ಕಾರಿ ಶಾಲೆಯಲ್ಲಿ ವಿವಿಧ ದಳಗಳ ಪದಗ್ರಹಣ

0

ಕಡಬ: ತಾಲೂಕಿನ ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ವಿವಿಧ ದಳಗಳನ್ನು ರಚಿಸಿ ಪದಗ್ರಹಣ ಮಾಡಲಾಯಿತು.


ಉದ್ಯಮಿ ಪ್ರದೀಪ್ ಕೊಲ್ಪೆ ಉದ್ಘಾಟಿಸಿ ಮಾತನಾಡಿ, ವಿವಿಧ ದಳಗಳನ್ನು ರಚಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿರುವುದು ಶ್ಲಾಘನೀಯ. ಖಾಸಗಿ ಶಾಲೆಯಲ್ಲಿ ಮಾತ್ರ ಇಂತಹ ಪದ್ದತಿಯನ್ನು ಅಳವಡಿಸಿಕೊಂಡು ಶಿಕ್ಷಣ ನೀಡಲಾಗುತ್ತಿದೆ. ಆದರೆ ಸರ್ಕಾರಿ ಶಾಲೆಯಲ್ಲಿ ಇಂತಹ ಪ್ರಯೋಗಗಳನ್ನು ಮಾಡಿರುವುದು ಮಾದರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ರೀತಿಯಾದ ಸ್ಪರ್ಧಾ ಮನೋಭಾವನೆ ಮೂಡಿಸಿ ಕಲಿಕಾ ಮಟ್ಟವನ್ನು ಸುಧಾರಿಸಲು ಶಿಕ್ಷಕರು ಶ್ರಮಿಸಿದಾಗ ಸರ್ಕಾರಿ ಶಾಲಾ ಬಗ್ಗೆ ಗೌರವ ಹೆಚ್ಚಾಗುತ್ತದೆ. ಪ್ರತಿ ಸರ್ಕಾರಿ ಶಾಲೆಯಲ್ಲೂ ಖಾಸಗಿ ಶಾಲೆಗಳ ವಾತಾವರಣವನ್ನು ಸೃಷ್ಟಿಸಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಎಂಬ ಶೈಕ್ಷಣಿಕ ಅಸಮಾನತೆಯನ್ನು ಹೋಗಲಾಡಿಸಬೇಕು ಎಂದರು.


ಶಾಲಾ ಮುಖ್ಯ ಶಿಕ್ಷಕ ನೀಲಯ್ಯ ನಾಯ್ಕ , ದಳಗಳ ನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ , ಧ್ವಜಗಳನ್ನು ನೀಡಿ ಮಾತನಾಡಿ, ಶಾತವಾಹನ, ರಾಷ್ಟçಕೂಟ, ಕದಂಬ ಮತ್ತು ಹೊಯ್ಸಳ ಎಂಬ ವಿದ್ಯಾರ್ಥಿಗಳ ನಾಲ್ಕು ದಳಗಳನ್ನು ರಚಿಸಲಾಗಿದೆ. ಈ ದಳಗಳಲ್ಲಿ ವರ್ಷಪೂರ್ತಿ ಸಹ ಪಠ್ಯ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಪ್ರತಿ ವಿದ್ಯಾರ್ಥಿಯಲ್ಲಿ ಶೈಕ್ಷಣಿಕ ಪ್ರಗತಿ ಕಾಣಬಹುದು ಎಂದರು. ಈ ಸಂದರ್ಭದಲ್ಲಿ ನಾಲ್ಕು ದಳಗಳಿಂದ ಪಥಸಂಚಲನ ನಡೆಯಿತು.


ಎಸ್.ಡಿ.ಎಂ.ಸಿ ಅಧ್ಯಕ್ಷ ಗೋಪಾಕೃಷ್ಣ.ಕೆ ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿ ಎಂ ಸಿ ಸದಸ್ಯರಾದ ಗಿರೀಶ್ , ಪ್ರಸನ್ನ ಪಾದೆ , ಗೌರವ ಶಿಕ್ಷಕಿ ಅನಿತಾ.ಕೆ ಉಪಸ್ಥಿರಿದ್ದರು. ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕ ಸ್ವಾಗತಿಸಿ , ನಿರೂಪಿಸಿದರು.

LEAVE A REPLY

Please enter your comment!
Please enter your name here