ಕೊಂಬೆಟ್ಟು, ನೆಲ್ಲಿಕಟ್ಟೆ ವಾರ್ಡ್‌ನ ಗಡಿ ಸ್ಥಳದಲ್ಲಿ ಧರೆ ಕುಸಿತ- ಮುಚ್ಚಿದ ರಸ್ತೆ

0

ರಸ್ತೆಯಿಂದ ಮಣ್ಣು ತೆರವು ಮಾಡಿದ ನಗರಸಭೆ -ಅಪಾಯದಲ್ಲಿರುವ ಎರಡು ಮನೆಗಳು !

ಪುತ್ತೂರು: ಕೊಂಬೆಟ್ಟು ದ್ರಾವೀಡ ಬ್ರಾಹ್ಮಣರ ಹಾಸ್ಟೇಲ್ ಸಮೀಪ ಕೊಂಬೆಟ್ಟು ಮತ್ತು ನೆಲ್ಲಿಕಟ್ಟೆ ವಾರ್ಡ್‌ನ ಗಡಿ ಸ್ಥಳದಲ್ಲಿ ಧರೆ ಕುಸಿದ ಪರಿಣಾಮ ರಸ್ತೆ ಮುಚ್ಚಿ ಹೋಗಿರುವ ಘಟನೆ ಜು.25ರಂದು ಬೆಳಗ್ಗೆ ನಡೆದಿದ್ದು, ಮುಚ್ಚಿದ ರಸ್ತೆಯ ಮೇಲಿನ ಮಣ್ಣುನ್ನು ನಗರಸಭೆ ತೆರವು ಮಾಡಿದೆ.


ಕೊಂಬೆಟ್ಟು ದ್ರಾವೀಡ ಬ್ರಾಹ್ಮಣರ ಹೋಸ್ಟೇಲ್ ಪಕ್ಕದಲ್ಲಿ ಕೊಂಬೆಟ್ಟು ಮತ್ತು ನೆಲ್ಲಿಕಟ್ಟೆ ವಾರ್ಡ್ ಗಡಿ ಸ್ಥಳದಲ್ಲಿ ಕೆಲವು ಮನೆಗಳಿಗೆ ಸಂಪರ್ಕ ರಸ್ತೆಯಾಗಿರುವ ಕಾಂಕ್ರೀಟ್ ರಸ್ತೆಯ ಮೇಲೆ ಧರೆ ಕುಸಿತಗೊಂಡಿದೆ. ಪರಿಣಾಮ ರಸ್ತೆ ಸಂಪೂರ್ಣ ಮುಚ್ಚಿ ಹೋಗಿದೆ. ವಿಷಯ ತಿಳಿದ ನಗರಸಭೆಯಿಂದ ರಸ್ತೆ ಮೇಲಿನ ಮಣ್ಣು ತೆರವು ಮಾಡಲಾಗಿದೆ. ಸ್ಥಳಕ್ಕೆ ಕೊಂಬೆಟ್ಟು ವಾರ್ಡ್‌ನ ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಭೇಟಿ ನೀಡಿದ್ದು, ಧರೆ ಕುಸಿತದೊಂದಿಗೆ ಜಾರಿದ ಮರಗಳನ್ನು ಕ್ರೇನ್ ಮೂಲಕ ತೆರವು ಮಾಡಿದ ಬಳಿಕ ಮಣ್ಣು ತೆರವು ಮಾಡುವ ಕಾರ್ಯ ನಡೆಸಲಾಗುವುದು ಎಂದು ಮಾಹಿತಿ ತಿಳಿದು ಬಂದಿದೆ.


ಎರಡು ಮನೆಗಳಿಗೆ ಅಪಾಯ:
ಧರೆ ಕುಸಿತದಿಂದಾಗಿ ಅಲ್ಲಿರುವ ಮರಗಳು ಬೀಳುವ ಸ್ಥಿತಿಯಲ್ಲಿದ್ದು, ಪಕ್ಕದಲ್ಲಿರುವ ನರಸಿಂಹ ಕಾಮತ್ ಮತ್ತು ಧರ್ಮಪಾಲ್ ಎಂಬವರ ಮನೆ ಅಪಾಯದ ಸ್ಥಿತಿಯಲ್ಲಿದೆ. ಸದ್ಯ ಎರಡು ಮರಗಳ ತೆರವು ಕಾರ್ಯಾಚರಣೆ ಮಾಡಬೇಕಾಗಿದೆ.

LEAVE A REPLY

Please enter your comment!
Please enter your name here