![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು:ಪುತ್ತೂರಿಗೆ ಕುಡಿಯುವ ನೀರು ಸರಬರಾಜು ಆಗುವ ಬೃಹತ್ ಪೈಪ್ ಕೋಡಿಂಬಾಡಿ ಶಾಲಾ ಬಳಿ ಒಡೆದಿರುವುದರಿಂದ ಪುತ್ತೂರು ಪಟ್ಟಣಕ್ಕೆ ಎರಡು ದಿನ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ.
ಕೋಡಿಂಬಾಡಿ ಶಾಲಾ ಬಳಿ ರಸ್ತೆ ನಿರ್ಮಾಣದ ಕಾರ್ಯದ ವೇಳೆ ಪುತ್ತೂರಿಗೆ ಸರಬರಾಜಾಗುವ ಕುಡಿಯುವ ನೀರಿನ ದೊಡ್ಡ ಗಾತ್ರದ ಪೈಪ್ಗೆ ಹಾನಿಯಾಗಿದೆ. ಇನ್ನು ಪೈಪ್ ದುರಸ್ತಿ ಮಾಡಿದ ಬಳಿಕವಷ್ಟೆ ಪುತ್ತೂರಿಗೆ ಕುಡಿಯುವ ನೀರು ಸರಬರಾಜಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದ್ದಾರೆ.
![](https://puttur.suddinews.com/wp-content/uploads/2023/08/f358d9a7-6626-4d52-9c2e-64d26908e26f.jpg)