ಈಶ್ವರಮಂಗಲ: ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ಸಾಮೂಹಿಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪೋಷಕ ಆಶಾಲತಾ, ದೀಕ್ಷಾ, ಧನ್ಯ ಮತ್ತು ಶಶಿಕಿರಣ್ ಅವರು ಅತಿಥಿಗಳಾಗಿ ಆಗಮಿಸಿದರು. ದೀಪ ಪ್ರಜ್ವಲನೆಯ ಮೂಲಕ ಅತಿಥಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹುಟ್ಟುಹಬ್ಬ ಆಚರಿಸುತ್ತಿರುವ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿಯರು ತಿಲಕವನ್ನಿಟ್ಟು ಆರತಿ ಬೆಳಗಿದರು. ಅತಿಥಿಗಳು ಮಕ್ಕಳಿಗೆ ಕೊಡುಗೆಯನ್ನು ನೀಡಿ ಶುಭ ಹಾರೈಸಿದರು. ಪ್ರಾಂಶುಪಾಲ ಕೆ ಶಾಮಣ್ಣ ಅತಿಥಿಗಳನ್ನು ಸ್ವಾಗತಿಸಿ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದರ ಮಹತ್ವವನ್ನು ತಿಳಿಸಿದರು. ಆಶಾಲತಾ, ಶಾಲಾ ಮುಖ್ಯ ಗುರು ಅಮರನಾಥ ಬಿ ಪಿ ಮಕ್ಕಳಿಗೆ ಶುಭ ಹಾರೈಸಿದರು.