
ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕದಲ್ಲಿ ನಡೆದ ಸವಣೂರು ವಲಯ ಮಟ್ಟದ ಬಾಲಕ ಬಾಲಕಿಯರ ಖೋ ಖೋ ಪಂದ್ಯಾಟದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳಾದ ನಿಶಾಂತ್ ಕೆ ಜಿ, ಮಧ್ವರಾಜ್, ಕುಮಾರ ಸುಬ್ರಹ್ಮಣ್ಯ, ಲಿಖಿತ್, ರಚನ್ ಸಿ ಎ , ಆರ್ಯ ಕೆನಾಜೆ, ಅನ್ವಿತ್ ಎಂ ವಿ, ದಿಶಾನ್, ಕುನಾಲ್, ಹರ್ಷಿತ್ ಬಿ, ರೋಶನ್ ಪಿ ಜೆ, ಕುಶಾಲ್, ಆಶ್ಲೇಷ್ ಸಿ ಎಮ್, ಧನ್ವಿತ್ ಕೆ, ಶ್ರೀರತ್ ವಿ ರೈ, ಧರಣ್ ಎಸ್ ರೈ, ಹಾಲೇಶ್ ಭಾಗವಹಿಸಿದ್ದರು. ನಿಶಾಂತ್ ಕೆ ಜಿ ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಇವರನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ , ಶಾಲಾ ಮುಖ್ಯಗುರು ಸರಸ್ವತಿ ಎಂ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಜಯಚಂದ್ರ ಮತ್ತು ವನಿತಾ ತರಬೇತು ನೀಡಿರುತ್ತಾರೆ.