ಚಾರ್ವಾಕ – ಸವಣೂರು ವಿವೇಕ ಜಾಗೃತ ಬಳಗದ ಆಶ್ರಯದಲ್ಲಿ 11ದಿನಗಳ ವರುಣ ಜಪ

0

ಪುತ್ತೂರು: ಸಾಲಿಗ್ರಾಮದ ಡಿವೈನ್ ಪಾರ್ಕ್ ಇದರ ಅಂಗ ಸಂಸ್ಥೆ ಚಾರ್ವಾಕ-ಸವಣೂರು ವಿವೇಕ ಜಾಗೃತ ಬಳಗದ ಆಶ್ರಯದಲ್ಲಿ 11ದಿನಗಳ ವರುಣ ಜಪ ಕಾರ್ಯಕ್ರಮಕ್ಕೆ ಆ.30ರಂದು ಬಳಗದ ಅಧ್ಯಕ್ಷೆ ಸುನಂದ ಮಾಧವ ಕರಂದ್ಲಾಜೆ ಚಾಲನೆ ನೀಡಿದರು. ಸುನಂದ ಮಾಧವ ಕರಂದ್ಲಾಜೆ ಅವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಡಿವೈನ್ ಪಾರ್ಕನ ಹಿರಿಯ ಅಧಿಕಾರಿ ಪ್ರಕಾಶ ಕುಮಾರ್ ಶೆಟ್ಟಿ ಬೆಳ್ಳಾರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಸ್ತುತ ವರ್ಷ ಮಳೆಯ ಕೊರತೆಯನ್ನು ಎದುರಿಸುತ್ತಿದ್ದು, ಬರಗಾಲದ ಭೀತಿ ಎದುರಾಗಿದೆ. ಪ್ರಕೃತಿಯ ಮೇಲೆ ಮಾನವನ ದಾಳಿ ಹೆಚ್ಚಾಗಿದ್ದು, ತಿದ್ದಿಕೊಳ್ಳಬೇಕಾದ ಸಮಯ ಬಂದಿದೆ. ದೇವರಿಗೆ ಮೊರೆ ಹೋಗುವುದು ತಕ್ಷಣದ ಪರಿಹಾರವಾಗಿದ್ದು, ಡಿವೈನ್ ಪಾರ್ಕ್ ನ ಆಧ್ಯಾತ್ಮಿಕ ಗುರು ಡಾ.ಚಂದ್ರ ಶೇಖರ ಉಡುಪ ಅವರ ಮಾರ್ಗದರ್ಶನದಲ್ಲಿ ವರುಣ ಜಪ ನಡೆಸಲಾಗುತ್ತಿದೆ. ವಿವೇಕ ಬಳಗದ ಹಿರಿಯರಾದ ಮೋನಪ್ಪ ಗೌಡ ಉಳವ, ದೈಪಿಲ ಕುಶಾಲಪ್ಪ ಗೌಡ, ವಸಂತ ಬಾಕಿಲ, ವಿಜಯ ಬಾಕಿಲ, ವೆಂಕಟ್ರಮಣ ಖಂಡಿಗ, ಉಮೇಶ ಕರಂದ್ಲಾಜೆ, ಬಾಲಕೃಷ್ಣ ಕರಂದ್ಲಾಜೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 11 ದಿನಗಳ ಕಾಲ 11ಮನೆಗಳಲ್ಲಿ ನಡೆಯುವ ಈ ಕಾರ್ಯಕ್ರಮ ಡಿವೈನ್‌ ಪಾರ್ಕ್‌ ನ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮವನ್ನು ಕೆ ವಿ ಮಾಧವ ಕರಂದ್ಲಾಜೆ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.

LEAVE A REPLY

Please enter your comment!
Please enter your name here