ಸೆ.9 : ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿಯ ಆಡಳಿತ ಮಂಡಳಿಗೆ ಚುನಾವಣೆ ,11 ನಿರ್ದೇಶಕ ಸ್ಥಾನಕ್ಕೆ 22 ನಾಮಪತ್ರ ಸಲ್ಲಿಕೆ

0

ಬೆಳ್ಳಾರೆ : ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿಯ ಆಡಳಿತ ಮಂಡಳಿಯ ಹನ್ನೊಂದು ನಿರ್ದೇಶಕ ಸ್ಥಾನಕ್ಕೆ ಸೆ.9ರಂದು ಚುನಾವಣೆ ನಡೆಯಲಿದೆ.ಚುನಾವಣೆಗೆ ಎರಡು ತಂಡದಿಂದ ಇಪ್ಪತ್ತೆರಡು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಒಂದು ತಂಡದಿಂದ ಅಬ್ದುಲ್ ಖಾದರ್ ಬಾಯಂಬಾಡಿ, ಅಬ್ದುಲ್ ನಾಸೀರ್ ಯು.ಎ, ಅಬ್ದುಲ್ ರಹಿಮಾನ್, ಕೆ, ಅಬ್ದುಲ್ ರಶೀದ್ ಟಿ, ಅಬೂಬಕ್ಕರ್ ಯು ಹೆಚ್(ಮಂಗಳ)ಅಜರುದ್ದೀನ್ ಯು,ಹಮೀದ್ ಹೆಚ್ ಎಂ,ಹನೀಫ್ ಎನ್,ಹಸೈನಾರ್ ಬಿ,ಹುಸೈನ್ ಸಾಹೇಬ್, ಇಸ್ಮಾಯಿಲ್ ಬಿ ನಾಮಪತ್ರ ಸಲ್ಲಿಸಿದ್ದಾರೆ.

ಇನ್ನೊಂದು ತಂಡದಿಂದ ಅಬ್ದುಲ್ ಬಶೀರ್, ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಅಬ್ದುಲ್ ರಹಿಮಾನ್ ಬಿ ಯು,ಅಬ್ದುಲ್ ರಜಾಕ್, ಅಶ್ರಫ್ ಎನ್, ಹಮೀದ್ ಕೆ ಎಂ(ಅಲ್ಪಾ), ಹಸೈನಾರ್ ಕೆ, ಮಹಮ್ಮದ್ ಅತಾವುಲ್ಲಾ ಮಹಮ್ಮದ್ ಕೆ ಎಂ,ಮಹಮ್ಮದ್ ಮುಸ್ತಫಾ, ಸುಲೈಮಾನ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಸೆ.9 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಚುನಾವಣೆ ನಡೆಯಲಿದೆ. ಮತದಾನ ಮುಗಿದ ಬಳಿಕ ಅಪರಾಹ್ನ 3 ಗಂಟೆಯಿಂದ ಮತ ಎಣಿಕೆ ನಡೆದು ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.ಬೆಳ್ಳಾರೆ ಜಮಾಯತ್ ವ್ಯಾಪ್ತಿಗೆ ಒಳಪಟ್ಟ 523ಮಂದಿ ಮತದಾರಿದ್ದಾರೆ ಎಂದು ಚುನಾವಣಾಧಿಕಾರಿ, ದ.ಕ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಅಬೂಬಕ್ಕರ್ ತಿಳಿಸಿದ್ದಾರೆ.11 ಸ್ಥಾನಕ್ಕೆ ಎರಡು ತಂಡದ 22ಮಂದಿ ನಾಮಪತ್ರ ಸಲ್ಲಿಸಿದ್ದು, ಪ್ರತೀ ಮನೆ ಮನೆಗೆ ಹೋಗಿ ಪ್ರಚಾರ ಕಾರ್ಯ ನಡೆಯುತ್ತಿದೆ. ಸೆ.9ರಂದು ನಡೆಯುವ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ.

LEAVE A REPLY

Please enter your comment!
Please enter your name here