ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಯ ರೆಸಿಡೆನ್ಸಿ ಉದ್ಘಾಟನೆ

0

ಮೊಟ್ಟೆತ್ತಡ್ಕ ಕಾಂಗ್ರೆಸ್ ಬೂತ್ ಸಮಿತಿಯಿಂದ ಶಾಸಕರಿಗೆ ಸ್ವಾಗತ

ಪುತ್ತೂರು: ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಯ ಅಧೀನದ ಬದ್ರಿಯ ರೆಸಿಡೆನ್ಸಿಯ ಉದ್ಘಾಟನೆಯು ಸೆ. 24 ರಂದು ನೆರವೇರಿದ್ದು, ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಾದ ಅಶೋಕ್ ಕುಮಾರ್ ರೈಯವರನ್ನು ಮೊಟ್ಟೆತ್ತಡ್ಕ ಕಾಂಗ್ರೆಸ್ ಬೂತ್ ಸಮಿತಿಯು ಮೊಟ್ಟೆತ್ತಡ್ಕ-ಮುಕ್ರಂಪಾಡಿ ತಿರುವಿನಲ್ಲಿ ಹೂಹಾರ ಹಾಕುವುದರೊಂದಿಗೆ ಸ್ವಾಗತಿಸಿ ಬಳಿಕ ವಾಹನ ಜಾಥಾ ಮೂಲಕ ಮೊಟ್ಟೆತ್ತಡ್ಕ ಬದ್ರಿಯ ಜುಮಾ ಮಸೀದಿಗೆ ಕರೆತರಲಾಯಿತು.
ನಗರಸಭೆ ಸದಸ್ಯೆ ಶ್ರೀಮತಿ ಶೈಲಾ ಪೈ, ಮೊಟ್ಟೆತ್ತಡ್ಕ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷ ರೊನಾಲ್ಡ್ ಮೊಂತೇರೊ, ಪ್ರಮುಖರಾದ ರಫೀಕ್ ಎಂ.ಕೆ, ವಿಶ್ವನಾಥ ಟೈಲರ್, ಹಮೀದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here