ಪುತ್ತೂರಿನಲ್ಲಿ ಧಾರವಾಡ ಮಿಶ್ರಾ ಪೇಡ’ ದ ಘಮ- ನಾಳೆ ಬೊಳುವಾರಿನಲ್ಲಿ ಜಾಣ ಫುಡ್ಸ್’ ಶುಭಾರಂಭ

0

ನಿಮ್ಮ ನೆಚ್ಚಿನ ಸ್ವೀಟ್ಸ್ ಮತ್ತು ಚಾಟ್ಸ್ ಸವಿಯಲು ಇಲ್ಲಿಗೊಮ್ಮೆ ವಿಸಿಟ್ ಮಾಡಲು ಮರೆಯದಿರಿ


ಪೇ ಡಾ’ ಎಂದರೆನಂಗೆ ಬೇಡ..’ ಅನ್ನುವವರು ಯಾರಿದ್ದಾರೆ!? ಅದರಲ್ಲೂ ಧಾರವಾಡ ಮಿಶ್ರಾ ಪೇಡ’ ತನ್ನ ಅನುಪಮ ಸ್ವಾದದಿಂದ ನಾಡಿನೆಲ್ಲೆಡೆ ಮನೆಮಾತಾಗಿದೆ. ಕುಂದಾನಗರಿ ಧಾರವಾಡಕ್ಕೊಂದು ವಿಶ್ವಮಟ್ಟದಲ್ಲೇ ವಿಶಿಷ್ಟ ಸ್ಥಾನವನ್ನು ಈ ಮಿಶ್ರಾ ಪೇಡ ದೊರಕಿಸಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಗಂಡುಮೆಟ್ಟಿನ ನಾಡು ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವುದು ಮಾತ್ರವಲ್ಲದೆ ಈ ಭಾಗದಲ್ಲೇ 50ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವುದು ಮಿಶ್ರಾ ಪೇಡದ ಸ್ವಾದದ ಪಸರುವಿಕೆಗೊಂದು ನಿದರ್ಶನವಾಗಿದೆ. ಇಷ್ಟು ಮಾತ್ರವಲ್ಲದೇ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮತ್ತು ದೇಶಾದ್ಯಂತ ಹಲವಾರು ಶಾಖೆಗಳನ್ನು ಹೊಂದಿರುವ ಧಾರವಾಡ ಮಿಶ್ರಾ ಪೇಡ ಸಂಸ್ಥೆಯು ನಾಡಿನಾದ್ಯಂತ ಸ್ವಾದ ಪ್ರಿಯರಿಗೆ ಪೇಡಾದ ಸವಿಯನ್ನು ನಿರಂತರವಾಗಿ ಉಣಿಸುತ್ತಾ ಬರುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲೇ ಅಂದರೆ 1933ರಲ್ಲಿ ಅವಧ್ ಬಿಹಾರಿ ಮಿಶ್ರಾ ಅವರಿಂದ ಸ್ಥಾಪನೆಗೊಂಡಮಿಶ್ರಾ ಪೇಡ’ ಸಂಸ್ಥೆ ಮಿಶ್ರಾ ಕುಟುಂಬದ ಸಮರ್ಥ ಮುಂದಾಳತ್ವದಲ್ಲಿ ಇವತ್ತು ದೇಶದ ಆಹಾರೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ನಾಡಿನ ಮನೆಮಾತಾಗಿದೆ.


ಜಾಣ ಫುಡ್ಸ್’ ಮಾಲಕತ್ವದಲ್ಲಿಬಿಗ್ ಮಿಶ್ರಾ ಪೇಡಾ’ರವರ ಶಾಖೆ ಪುತ್ತೂರಿನ ಬೊಳುವಾರಿನಲ್ಲಿರುವ ಆಕ್ಸಿಸ್ ಬ್ಯಾಂಕ್ ಎದುರು ಸೆ. 29ರಂದು ಶುಭಾರಂಭಗೊಳ್ಳಲಿದೆ.ಮಿಶ್ರಾ ಪೇಡ ಮಾತ್ರವಲ್ಲದೇ, ವಿವಿಧ ರೀತಿಯ ಸಿಹಿ ತಿಂಡಿಗಳು, ನಮ್ ಕೀನ್ ಮತ್ತು ಚಾಟ್ ಮಸಾಲಗಳು ಸ್ವಾದ ಪ್ರಿಯರ ಮನಸ್ಸನ್ನು ತಣಿಸಲು ಸಜ್ಜಾಗಿದೆ.


ಲಾಲ್ ಪೇಡಾ, ತುಪ್ಪದ ಮೈಸೂರ್ ಪಾಕ್, ಕರದಂಟು, ಸ್ಪೆಷಲ್ ಕುಂದಾ, ತುಪ್ಪದ ಜಾಮೂನು, ಕಲ್ಕಂಡ್, ಜಹಾಂಗೀರ್, ಕಾಜು ಕಟ್ಲಿ, ಬಾದಾಮ್ ಹಲ್ವಾ, ಬೇಸನ್ ಲಾಡು ಸಹಿತ ವಿವಿಧ ಬಗೆಯ ಸಿಹಿ ತಿಂಡಿಗಳ ಅಪೂರ್ವ ಸಂಗ್ರಹವೇ ಇಲ್ಲಿರಲಿದೆ. ಬರ್ತ್ ಡೇ, ಆನಿವರ್ಸರಿ, ಶುಭ ಸಮಾರಂಭ, ಸಂಭ್ರಮಾಚರಣೆ ಸೇರಿದಂತೆ ನಿಮ್ಮ ಸಂಭ್ರಮದ ಕ್ಷಣಗಳನ್ನು ಜಾಣ ಫುಡ್ಸ್’ನಲ್ಲಿ ಸಿಗುವ ವೈವಿಧ್ಯಮಯ ಸ್ವೀಟ್‌ಗಳ ಸಂಗ್ರಹಗಳೊಂದಿಗೆ ಯಾಕೆ ಆಚರಿಸಿಕೊಳ್ಳಬಾರದು? ಇನ್ನು, ಮನಸ್ಸನ್ನು ರಿಲ್ಯಾಕ್ಸ್ ಗೊಳಿಸಿಕೊಳ್ಳಲು ಮನೆಮಂದಿಯೊಂದಿಗೆ ಪೇಟೆ ಕಡೆಗೊಮ್ಮೆ ಬಂದಾಗ ಇಲ್ಲಿಗೊಮ್ಮೆ ಭೇಟಿಕೊಟ್ಟು ನಿಮ್ಮ ಫ್ಯಾಮಿಲಿಯೊಂದಿಗೆ, ಸ್ನೇಹಿತರೊಂದಿಗೆ, ಪ್ರೀತಿಪಾತ್ರರೊಂದಿಗೆಜಾಣ ಫುಡ್ಸ್’ಗೆ ಭೇಟಿ ಕೊಟ್ಟು ಇಲ್ಲಿ ಸಿಗುವ ನಮ್ ಕೀನ್ ಮತ್ತು ಚಾಟ್ ಮಸಾಲಗಳ ರುಚಿಯನ್ನು ಸವಿದು ಹೊಟ್ಟೆ ತಂಪಾಗಿಸಿ ಮನಸ್ಸನ್ನು ಮುದಗೊಳಿಸಿಕೊಳ್ಳುವುದಕ್ಕೆ ಸದವಕಾಶವಿದೆ.


ಹಾಗಾದ್ರೆ ಇನ್ನು ಯೋಚಿಸುವಿರೇಕೆ..? ನಾಳೆ (ಸೆ.29) ಶುಭಾರಂಭಗೊಳ್ಳಲಿರುವ ಜಾಣ ಫುಡ್ಸ್’ಗೆ ನಿಮ್ಮ ಭೇಟಿಯ ಸಮಯವನ್ನು ಫಿಕ್ಸ್ ಮಾಡಿಕೊಳ್ಳಿ, ಮಿಶ್ರಾ ಪೇಡ, ಕರದಂಟು, ಮೈಸೂರ್ ಪಾಕ್, ಜಹಾಂಗೀರ್ ಸಹಿತ ನಾನಾ ಬಗೆಯ ಸ್ವೀಟ್ಸ್ ಮತ್ತು ವೈವಿಧ್ಯಮಯ ಚಾಟ್ಸ್ ಸವಿದುಓಹೋ.. ಸೂಪರ್ ಆಗಿದೆ..’ ಅನ್ನಿ.ಪ್ರತೀದಿನ ಬೆಳಿಗ್ಗೆ 8.30ರಿಂದ ರಾತ್ರಿ 10.30ರವರೆಗೆ `ಜಾಣ ಫುಡ್ಸ್’ ಗ್ರಾಹಕರ ಸೇವೆಗಾಗಿ ತೆರೆದಿರುತ್ತದೆ.


ಧಾರವಾಡ ಮಿಶ್ರಾ ಪೇಡ ಸಂಸ್ಥೆಯ ನೂತನ ಶಾಖೆ ಹತ್ತೂರ ಒಡೆಯನ ನಾಡಿನಲ್ಲಿ ಶುಭಾರಂಭಗೊಳ್ಳುತ್ತಿದ್ದು, ಪುತ್ತೂರು ಮಾತ್ರವಲ್ಲದೇ ಈ ಭಾಗದ ಹತ್ತೂರ ಜನತೆಗೂ ಪೇಡಾ ಸ್ವಾದ ಮತ್ತು ವಿವಿಧ ತಿಂಡಿ-ತಿನಸುಗಳ ಘಮವನ್ನು ಪಸರಿಸಲು ಸಜ್ಜಾಗಿದೆ.

LEAVE A REPLY

Please enter your comment!
Please enter your name here