ಪುತ್ತೂರು: ಉತ್ತರ ಪ್ರದೇಶದ ಫತೆಪೂರದಲ್ಲಿ ನಡೆದ ವಿದ್ಯಾಭಾರತಿ ರಾಷ್ಷ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.
ತಂಡದಲ್ಲಿ ಶಾಲಾ ವಿದ್ಯಾರ್ಥಿನಿಯರಾದ ಪಿ ಕವನಶ್ರೀ (ಗೋಪಾಲಕೃಷ್ಣ ಮತ್ತು ಶೈಲಜಾ ದಂಪತಿಗಳ ಪುತ್ರಿ), ಪೂಜಾ (ಸುರೇಶ್ ಮತ್ತು ವನಿತಾ ದಂಪತಿಗಳ ಪುತ್ರಿ), ಮಾನಸ ಎಂ(ಜಯೇಶ್ ಮತ್ತು ಸುಮಿತ್ರ ದಂಪತಿಗಳ ಪುತ್ರಿ), ಸುಶಾ ಎಂ (ಕೃಷ್ಣಪ್ಪ ಎಂ ಮತ್ತು ಗೀತಾ ದಂಪತಿಗಳ ಪುತ್ರಿ), ಯಲ್ಲವ್ವ (ಹನುಮಂತ ಮತ್ತು ಲಕ್ಷ್ಮಿ ದಂಪತಿಗಳ ಪುತ್ರಿ), ಅಂಕಿತಾ (ರೇಗಪ್ಪ ಮತ್ತು ರೇಶ್ಮಾ ದಂಪತಿಗಳ ಪುತ್ರಿ) ಭಾಗವಹಿಸಿದ್ದರು. ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ದಾಮೋದರ್ ಮತ್ತು ಹರಿಣಾಕ್ಷಿ ಹಾಗೂ ಮನೋಹರ್ ತರಬೇತಿ ನೀಡಿದ್ದರು.