ಪುತ್ತೂರು : ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗವು ‘ಡಿಜಿಟಲ್ ಇಂಡಿಯಾ ಫಾರ್ ನ್ಯೂ ಇಂಡಿಯಾ’ ಎಂಬ ವಿಷಯದ ಕುರಿತು ತನ್ನ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ರಾಷ್ಟ್ರೀಯ ಮಟ್ಟದ ಪತ್ರ ಬರಹ ಸ್ಪರ್ಧೆಯನ್ನು ಆಯೋಜಿಸಿದೆ.
18 ವರ್ಷದೊಳಗಿನ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಎರಡು ವಿಭಾಗಗಳ ಅಡಿಯಲ್ಲಿ ಕನ್ನಡ/ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪತ್ರಗಳನ್ನು ಬರೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವಂತೆ ಇಲಾಖೆ ಮನವಿ ಮಾಡಿಕೊಂಡಿದೆ. ಅವುಗಳನ್ನು ಇನ್‌ಲ್ಯಾಂಡ್ ಲೆಟರ್ ಕಾರ್ಡ್‌ಗಳಲ್ಲಿ 500 ಪದಗಳಲ್ಲಿ ಅಥವಾ 4 ಗಾತ್ರದ ಹಾಳೆಯಲ್ಲಿ (ಲಕೋಟೆಗಳಲ್ಲಿ ಕಳುಹಿಸಲು) 1,000 ಪದಗಳಲ್ಲಿ ಒಂದೇ ವಿಷಯದ ಎರಡೂ ವಯಸ್ಸಿನ ವರ್ಗಗಳಿಗೆ ಬರೆಯಬಹುದು.
ಲಕೋಟೆಗಳನ್ನು ಅಕ್ಟೋಬರ್ 31ರಂದು ಅಥವಾ ಅದಕ್ಕೂ ಮೊದಲು ತಲುಪುವಂತೆ ಅಂಚೆ ಕಚೇರಿಗಳ ಹಿರಿಯ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು- 575002 ಅವರಿಗೆ ಕಳುಹಿಸಬೇಕು. ಪತ್ರಗಳು ಬರೆಯುವವರ ಸಂಪೂರ್ಣ ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಹೊಂದಿರಬೇಕು. ರಾಜ್ಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ಮೂರು ಅತ್ಯುತ್ತಮ ಪ್ರಬಂಧಗಳಿಗೆ ತಲಾ 25,000 ರೂ, 10,000 ರೂ ಮತ್ತು 5,000 ರೂಪಾಯಿ ಮತ್ತು ರಾಷ್ಟ್ರ ಮಟ್ಟದಲ್ಲಿ ತಲಾ 50,000 ರೂ, 25,000 ರೂ ಮತ್ತು 10,000 ರೂಪಾಯಿ ಬಹುಮಾನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ www.karnatakapost.gov.in ಅನ್ನು ಸಂಪರ್ಕಿಸಬಹುದಾಗಿದೆ.