ಏಸ್ ಮೋಟರ‍್ಸ್ ನಲ್ಲಿ ಟಿವಿಎಸ್ ರೈಡರ್ ಸೂಪರ್ ಸ್ಕ್ವಾಡ್ ಬಿಡುಗಡೆ

0

ಪುತ್ತೂರು: ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಬರೆದಿರುವ ಟಿವಿಎಸ್ ಮೋಟಾರ್‌ನ ಆಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ರೈಡರ್ ಸೂಪರ್ ಸ್ಕ್ವಾಡ್ ಬೈಕ್‌ನ್ನು ಟಿವಿಎಸ್ ಅಧಿಕೃತ ವಿತರಕರಾಗಿರುವ ಬೊಳುವಾರಿನ ಏಸ್ ಮೋಟರ‍್ಸ್ ನಲ್ಲಿ ಬಿಡುಗಡೆಗೊಂಡಿತು. ನೂತನ ವಾಹನದ ಪುತ್ತೂರಿನ ಪ್ರಥಮ ಗ್ರಾಹಕರಾಗಿದ್ದ ಪ್ರಕಾಶ್ ಆಚಾರ್ಯ, ಸುಮಿತ್ ಹಾಗೂ ಕೇಶವರವರಿಗೆ ಕೀಲಿ ಕೈ ಹಸ್ತಾಂತರಿಸಲಾಯಿತು.

ರೈಡ್ ಸ್ಕ್ವಾಡ್ ಬೈಕ್ 124.8 ಸಿಸಿ ಎಂಜಿನ್ ಲಭ್ಯವಿದೆ. ಏರ್ ಕೂಲ್ ಮೋಟಾರ್, ಜೊತೆಗೆ ಇಂಟರ್ನಲ್ ಆಯಿಲ್ ಕೂಲರ್ ಸಿಸ್ಟಮ್ ಅಳವಡಿಸಲಾಗಿದೆ. ಇದರಿಂದ ಬೈಕ್ ಹೆಚ್ಚಿನ ಹೀಟ್ ಆಗುವುದು ತಪ್ಪಲಿದೆ. ಜೊತೆಗೆ ಅತ್ಯುತ್ತಮ ಮೈಲೇಜ್ ಹಾಗೂ ಪರ್ಫಾಮೆನ್ಸ್ ಗೆ ಪಡೆಯಲು ಯಾವುದೇ ಸಮಸ್ಯೆಯಾಗುವುದಿಲ್ಲ. 11.22 ಬಿಹೆಚ್‌ಪಿ ಪವರ್ ಹಾಗೂ 11.2 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್, ಸ್ಟಾಪ್ ಸ್ಟಾರ್ಟಿಂಗ್ ಸಿಸ್ಟಮ್ ಹೊಂದಿದೆ. ಜೊತೆಗೆ ಸೈಲೆಂಟ್ ಮೋಟಾರ್ ಸ್ಟಾರ್ಟರ್‌ನಿಂದ ಉತ್ತಮ ಮೈಲೇಜ್ ಲಭ್ಯವಾಗಲಿದೆ. 17 ಇಂಚಿನ ಅಲೋಯ್ ವ್ಹೀಲ್, ಡಿಸ್ಕ್ ಹಾಗೂ ಡ್ರಮ್ ಬ್ರೇಕ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ.

ಕೆಂಪು ಮತ್ತು ಕಪ್ಪು ಬಣ್ಣದ ಯೋಜನೆಯಲ್ಲಿ ವಿನ್ಯಾಸಗೊಳಿಸಲಾಗಿದೆ, ಆದರೆ ಬ್ಲ್ಯಾಕ್ ಪ್ಯಾಂಥರ್‌ನಿಂದ ಪ್ರೇರಿತವಾದ ಆವೃತ್ತಿಯು ಕಪ್ಪು ಮತ್ತು ನೇರಳೆ ಬಣ್ಣದ ಸ್ಕೀಮ್ ಅನ್ನು ಹೊಂದಿದೆ. ಇದು ಟಿವಿಎಸ್ ಮತ್ತು ಮಾರ್ವೆಲ್ ನಡುವಿನ ಮತ್ತೊಂದು ಸಹಯೋಗವನ್ನು ಗುರುತಿಸುತ್ತದೆ, ಅವರ ದ್ವಿಚಕ್ರ ವಾಹನಗಳ ಹಿಂದಿನ ವಿಶೇಷ ಆವೃತ್ತಿಗಳಾದ ಎನ್‌ಟಾರ್ಕ್ 125 ಸ್ಕೂಟರ್‌ಗಳು ಥಾರ್, ಐರನ್ ಮ್ಯಾನ್, ಬ್ಲ್ಯಾಕ್ ಪ್ಯಾಂಥರ್ ಮತ್ತು ಸ್ಪೈಡರ್‌ಮ್ಯಾನ್‌ನಿಂದ ಸ್ಫೂರ್ತಿ ಪಡೆದ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆಯ ಸರಳ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಳ ದಾಖಲೆಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸುಲಭ ಹಣಕಾಸು ಸೌಲಭ್ಯ, ಸ್ಥಳದಲ್ಲೇ ಫೈನಾನ್ಸ್, ಎಕ್ಸ್ಚೇಂಜ್, ಬುಕ್ಕಿಂಗ್ ಹಾಗೂ ವಿತರಣಾ ಸೌಲಭ್ಯ ನೀಡಲಾಗುತ್ತಿದೆ. ಗ್ರಾಹಕರು ಭಾವಚಿತ್ರ, ವಿಳಾಸ ದಾಖಲೆ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಐ.ಡಿ. ಕಾರ್ಡ್ನೊಂದಿಗೆ ಬಂದಲ್ಲಿ ಸ್ಥಳದಲ್ಲೇ ವಾಹನ ನೀಡಲಾಗುವುದು. ಅತೀ ಕಡಿಮೆ ಮುಂಗಡ ಪಾವತಿಯೊಂದಿಗೆ ವಾಹನವನ್ನು ನಿಮ್ಮದಾಗಿಸುವ ಅವಕಾಶವನ್ನು ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಶೋ.ರೂಂ ಅಥವಾ ಮೊಬೈಲ್ 7022003166 ನಂಬರನ್ನು ಸಂಪರ್ಕಿಸುವಂತೆ ಶೋರೂಂನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here