ನಿಡ್ಪಳ್ಳಿ: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಮಹತ್ವಾಕಾಂಕ್ಷಿ ಯೋಜನೆಯಾದ ಎಂ.ಫ್ರೆಂಡ್ಸ್ ” ಕ್ಲಾಸ್ ಆನ್ ವೀಲ್ಸ್ ” ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಕಂಪ್ಯೂಟರ್ ಸಾಕ್ಷರತೆ ನೀಡುವ ರಾಜ್ಯದಲ್ಲೇ ವಿನೂತನ ಕಾರ್ಯಕ್ರಮದ ಬಸ್ ನ.22ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ದೆ ಉಪ್ಪಳಿಗೆ ಇಲ್ಲಿಗೆ 7ನೇ ತರಗತಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವ ಸಲುವಾಗಿ ಶಾಲೆಗೆ ಆಗಮಿಸಿದೆ.
ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿಯ ಬಗ್ಗೆ ಕಂಪ್ಯೂಟರ್ ಶಿಕ್ಷಕಿಯರಾದ ವೀಕ್ಷಾ ಮತ್ತು ಚೈತ್ರ ಮಾಹಿತಿ ನೀಡಿದರು. ಶಾಲಾ ಮುಖ್ಯಗುರು ಲಿಂಗಮ್ಮ ಹಾಗೂ ಶಿಕ್ಷಕ ವೃಂದದವರು ಮತ್ತು ಎಸ್ ಡಿಎಂಸಿ ಅಧ್ಯಕ್ಷ ಲೋಕನಾಥ್ ಆಚಾರ್ಯ ಕಂಪ್ಯೂಟರ್ ಸಾಕ್ಷರತಾ ತಂಡಕ್ಕೆ ಸ್ವಾಗತ ನೀಡಿದರು.