ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇದರ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಲಾಸಂಗಮ 2023 24ರಲ್ಲಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಪ್ರೌಢಶಾಲಾ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಹೇಮಂತ್ ಕುಮಾರ್ ಕೆ.ವೈ ಪ್ರಥಮ ಸ್ಥಾನ, ಜನಪದ ಗೀತೆಯಲ್ಲಿ ಹರ್ಷ ದ್ವಿತೀಯ ಸ್ಥಾನ, ಸಂಸ್ಕೃತ ಭಾಷಣದಲ್ಲಿ ವಸುಶರ್ಮ ದ್ವಿತೀಯ ಸ್ಥಾನ,ಹಿರಿಯ ಪ್ರಾಥಮಿಕ ವಿಭಾಗದ ಆಶುಭಾಷಣದಲ್ಲಿ ವೈಷ್ಣವಿ ದ್ವಿತೀಯ ಸ್ಥಾನ, ಭಕ್ತಿ ಗೀತೆ ಸ್ಪರ್ಧೆಯಲ್ಲಿ ಅದ್ವೈತ ತಿರುಮಲೇಶ ದ್ವಿತೀಯ ಸ್ಥಾನ,
ಕಿರಿಯ ಪ್ರಾಥಮಿಕ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಐಶಾನಿ ರೈ ತೃತೀಯ ಸ್ಥಾನ, ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಧರಿತ್ರಿ ಸಿ. ಎಚ್ ತೃತೀಯ ಸ್ಥಾನ, ಕನ್ನಡ ಕಥೆ ಹೇಳುವ ಸ್ಪರ್ಧೆಯಲ್ಲಿ ಇಹಾನಿ ಎಸ್. ಶೆಟ್ಟಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಹಾಗೂ ಸದಸ್ಯರು, ಮುಖ್ಯಗುರು ರಾಜೇಶ್ ಎನ್ ಹಾಗೂ ಶಿಕ್ಷಕ ವೃಂದ ಪೋಷಕ ವೃಂದದವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.