ಸಾಲೆತ್ತೂರು: ಅಡಿಕೆ ಮರಬಿದ್ದು ಮಹಿಳೆ ಮೃತ್ಯು

0

ವಿಟ್ಲ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರವೊಂದು ಮುರಿದು ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ಸಾಲೆತ್ತೂರು‌ ಸಮೀಪ ನಡೆದಿದೆ.

ಸಾಲೆತ್ತೂರು ನಿವಾಸಿ ಗುಲಾಬಿ(48 ವ.) ಮೃತದುರ್ದೈವಿ ಮಹಿಳೆ. ಗುಲಾಬಿರವರು ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರವೊಂದು ಆಕಸ್ಮಿಕವಾಗಿ ಮುರಿದು ಬಿದ್ದು ಅವರ ತಲೆಯ ಭಾಗಕ್ಕೆ ತೀವ್ರ ತರಹದ ಪೆಟ್ಟಾಗಿತ್ತು. ಕೂಡಲೇ ಅವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ‌. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here