ಪುತ್ತೂರು:ACCE (INDIA) ಅಲ್ಟ್ರಾಟೆಕ್ ಅವಾರ್ಡ್ಸ್ 2023 ಪುತ್ತೂರಿನ ಮನು ಎಂ. ರೈ ರವರ ಮಾಲಕತ್ವದ ಕಟ್ಟಡ ನಿರ್ಮಾಣ ಸಂಸ್ಥೆ Munnalayi Infra projects ಎರಡನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.ಅಸೋಸಿಯೇಷನ್ ಆಫ್ consulting civil engineers (india) ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಲಿ. ”ಅಲ್ಟ್ರಾಟೆಕ್ ಅವಾರ್ಡ್ಸ್ 2023” ಕಾರ್ಯಕ್ರಮವು ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಹಾಲ್ ಕಾಂಪ್ಲೆಕ್ಸ್ ನಲ್ಲಿ ಜರುಗಿತು.
ನಿರ್ಮಾಣ ಉದ್ಯಮದಲ್ಲಿ ಅದ್ವಿತೀಯ ಸಾಧನೆ ಮಾಡಿದ ಮನು. ಎಂ. ರೈ ಪುತ್ತೂರು ರವರ ಮಾಲೀಕತ್ವದ ಕಟ್ಟಡ ನಿರ್ಮಾಣ ಸಂಸ್ಥೆ, Munnalayi Infra Projects, ಇತ್ತೀಚಿಗೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಗುರಿಪಳ್ಳ ಎಂಬಲ್ಲಿ ನಿರ್ಮಿಸಿದ ‘ಶುಭೋದಯ ಫಾರ್ಮ್ಸ್’ ಗೆ Association of Consulting Civil Engineers- ACCE (INDIA) ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ( Ultra Tech Cement Ltd) ಕೊಡಮಾಡುವ Well built residential villa award ಪ್ರಶಸ್ತಿ ಲಭಿಸಿದೆ.’ಶುಭೋದಯ ಫಾರ್ಮ್ಸ್’ ಸಂಪೂರ್ಣವಾಗಿ ಹಳ್ಳಿ ಸೊಗಡಿನಲ್ಲಿ ನಿರ್ಮಾಣವಾಗಿದ್ದು, ಪಾರಂಪರಿಕ ಶೈಲಿಯ ಮನೆಯನ್ನು ಆಧುನಿಕತೆಯ ಸ್ಪರ್ಶದೊಂದಿಗೆ ನಿರ್ಮಾಣ ಮಾಡಿದ ಖ್ಯಾತಿ Munnalayi Infra Projects ದ್ದಾಗಿದೆ. ವಸತಿ ಕಟ್ಟಡ, ಗೋ ಶಾಲೆಗಳನ್ನು ನಾವಿಲ್ಲಿ ಕಾಣಬಹುದಾಗಿದೆ.
ಮುನ್ನಲಾಯಿ ಇಂಫ್ರಾ ಪ್ರಾಜೆಕ್ಟ್ ಗೆ ಉತ್ತಮ ವಿನ್ಯಾಸಗಾರ ಪ್ರಶಸ್ತಿ ಮತ್ತು ಮನೆಯನ್ನು ತಾಂತ್ರಿಕವಾಗಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ ಎಡ್ಮೇರು ದೊಡ್ಡಮನೆ ರಮ್ಯಶ್ರೀ ಪ್ರಶಾಂತ್ ಶೆಟ್ಟಿ ಅವರಿಗೆ Best technical management consultant ಅವಾರ್ಡ್ ಮತ್ತು ಮನೆ ನಿರ್ಮಾಣವನ್ನು ಉತ್ತಮ ರೀತಿಯಲ್ಲಿ ನಿರ್ಮಿಸಿದ ಮುನ್ನಲಾಯಿ ಇಂಫ್ರಾ ಪ್ರಾಜೆಕ್ಟನ ಮಾಲಕರಾದ ನರಿಮೊಗರು ಮನು. ಎಮ್. ರೈ ಯವರಿಗೆ ಉತ್ತಮ constructor builder ಪ್ರಶಸ್ತಿ ಲಭಿಸಿದೆ.
Architectural & structural Designs, self sustainable practices, green concept & rain water harvesting, safety practices adopted during construction, optimum utilisation of site area & floor area, Types of Concrete used & quality assement of materials, technical services & labour trainings, challenges faced during construction ಈ ಎಲ್ಲಾ quality ಗಳನ್ನು ಗಣನೆಗೆ ತೆಗೆದುಕೊಂಡು ಪ್ರಶಸ್ತಿಯನ್ನು ನೀಡಲಾಗಿದೆ.
ನರಿಮೊಗರು ಮೋಹನ್ ರೈ ಮತ್ತು ಗೀತಾ ದಂಪತಿ ಪುತ್ರರಾದ ಮನು ಎಂ. ರೈರವರು ಎಂಬಿಎ ಪದವೀಧರರಾಗಿದ್ದು 2012ರಿಂದ ನಿರ್ಮಾಣ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.