ಇದರಿಂದ ಜಿಲ್ಲೆಯ ಇತರ ಕ್ಷೇತ್ರದ ದಲಿತರಿಗೆ ಮೀಸಲಾತಿ ದೊರಕುತ್ತದೆ
ಜನರಲ್ ಸೀಟಿಗಾಗಿ ಸುಳ್ಯದವರು ಇತರ ಕ್ಷೇತ್ರ ಹುಡುಕುವುದು ನಿಲ್ಲುತ್ತದೆ.
ಈಗಿನ ಸಂಸದರು, ಮುಂದೆ ಸಂಸದ ಸ್ಥಾನಕ್ಕೆ ಸ್ಪರ್ಧಿಸುವವರು ಈ ಹೋರಾಟದ ಜವಾಬ್ದಾರಿ ನೇತೃತ್ವ ವಹಿಸಿಕೊಳ್ಳಬೇಕು. ಅದನ್ನು ಕೇಳುವುದು ಜನತೆಯ ಮೂಲಭೂತ ಹಕ್ಕು ಮತ್ತು ಕರ್ತವ್ಯ.
ಸುಳ್ಯ ಕ್ಷೇತ್ರ 1962ರಿಂದಲೇ ದಲಿತರಿಗೆ ಮೀಸಲಾತಿ ಕ್ಷೇತ್ರವಾಗಿ ಮುಂದುವರಿದುಕೊಂಡು ಬಂದಿದೆ. ಅದು ಜಿಲ್ಲೆಯ ದಲಿತರಿಗೆಂದು ಮೀಸಲು ಇರಿಸಿದ ಕ್ಷೇತ್ರ ಎಂದು ಎಲ್ಲರಿಗೂ ತಿಳಿದಿದೆ. ಹೀಗಿದ್ದರೂ ಅದನ್ನು ರೊಟೇಷನ್ನಲ್ಲಿ ದ.ಕ. ಜಿಲ್ಲೆಯ ಇತರ ಕ್ಷೇತ್ರಗಳಿಗೆ ಬದಲಾಯಿಸುವ ಪ್ರಕ್ರಿಯೆ ನಡೆಯಲಿಲ್ಲ. ಯಾಕೆಂದರೆ ಆ ದಿಸೆಯಲ್ಲಿ ಹೋರಾಟವೇ ನಡೆಯಲಿಲ್ಲ. ಅದಕ್ಕೆ ಮೀಸಲಾತಿ ವ್ಯವಸ್ಥೆಯ ಕುರಿತಾದ ಮಾಹಿತಿ ಮತ್ತು ಮತದಾರರ ಮೂಲಭೂತ ಹಕ್ಕಿನ ಅರಿವಿನ ಕೊರತೆಯೇ ಕಾರಣ ಎನ್ನಬಹುದು.
ಈ ಮೀಸಲಾತಿ ಬದಲಾವಣೆಯ ಬಗ್ಗೆ ವಿಚಾರಿಸಿದಾಗ ಕೋರ್ಟ್ಗೆ ಹೋಗಿ ಹೋರಾಟ ಮಾಡಬಹುದು ಎಂದು ವಕೀಲರುಗಳಿಂದ ಸಲಹೆ ಬಂದಿದೆ. ಆದರೆ ಆ ವಿಷಯ ಡಿ.ಲಿಮಿಟೇಷನ್ ಕಮಿಟಿಯ ಮುಂದೆ ಬಂದು ಅಲ್ಲಿ ನಿರ್ಣಯವಾಗಬೇಕೆಂದು ತಿಳಿಸಿದ್ದಾರೆ. ಇದೀಗ 2026ರಲ್ಲಿ ಡಿ.ಲಿಮಿಟೇಷನ್ ಕಮಿಟಿಯ ಸಭೆ ನಡೆಯಲಿದೆ. ಆ ಕಮಿಟಿಯ ಮುಂದೆ ಅತ್ಯಂತ ಪ್ರಮುಖ ವಿಷಯಗಳು ಬರಲಿವೆ.
ಕ್ಷೇತ್ರದ ವಿಂಗಡಣೆ 2. ಸೀಟುಗಳ ಹೆಚ್ಚಳ 3. ಮಹಿಳಾ ಮೀಸಲಾತಿ ಕ್ಷೇತ್ರಗಳು 4. ದಲಿತ ಮೀಸಲಾತಿ ಕ್ಷೇತ್ರಗಳು. ಅದರಲ್ಲಿ ಮಹಿಳಾ ಮೀಸಲಾತಿ ಕ್ಷೇತ್ರಗಳಂತೂ ರೊಟೇಷನಿಗೆ ಒಳಪಡುವುದು ಖಂಡಿತ. ಮೀಸಲಾತಿ ಕ್ಷೇತ್ರಗಳು ಕೂಡಾ ರೊಟೇಷನ್ಗೆ ಒಳಗಾಗಬಹುದು. ಸುಳ್ಯದಲ್ಲಿ 64 ವರ್ಷಗಳಿಂದ ಇರುವಂತೆ ಬದಲಾಗದೇ ಇರಬಹುದು. ಆದರೆ ಈ ಸಲ ಮೀಸಲಾತಿ ರೊಟೇಷನ್ ಆಗದೇ ಇದ್ದರೆ ಮುಂದಕ್ಕೆ 20-25 ವರ್ಷಗಳೊಳಗೆ ಅದೇ ಪರಿಸ್ಥಿತಿ ಮುಂದುವರಿಯುತ್ತದೆ. ಯಾಕೆಂದರೆ 20-25 ವರ್ಷಗಳಿಗೊಮ್ಮೆ ಮಾತ್ರ ಡಿ.ಲಿಮಿಟೇಷನ್ ಕಮಿಟಿ ಸಭೆಗಳು ನಡೆಯುತ್ತದೆ.
ಈ ಮೇಲಿನ ಎಲ್ಲಾ ವಿಷಯಗಳ ಹಿನ್ನಲೆಯಲ್ಲಿ ಸುಳ್ಯ ಕ್ಷೇತ್ರದ ಜನರು ಕ್ಷೇತ್ರದ ಮೀಸಲಾತಿ ರೊಟೇಷನ್ಗೆ ಮತ್ತು ದ.ಕ. ಜಿಲ್ಲೆಯ ಇತರ ಕ್ಷೇತ್ರದ ದಲಿತರು ತಮ್ಮ ಕ್ಷೇತ್ರಕ್ಕೆ ಮೀಸಲಾತಿ ಸರದಿಯಲ್ಲಿ ಬರುವಂತೆ ಬೇಡಿಕೆ ಸಲ್ಲಿಸಬೇಕು. ಹೋರಾಟ ನಡೆಸಬೇಕು. ಈ ಮೇಲಿನ ಎಲ್ಲಾ ವಿಷಯಗಳು ಪಾರ್ಲಿಮೆಂಟ್ನಲ್ಲಿ ನಿರ್ಣಯವಾಗುವುದರಿಂದ ಈ ಕ್ಷೇತ್ರದ ಸಂಸದರು ಮತ್ತು ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಈ ರೊಟೇಷನ್ ಬಗ್ಗೆ ಜವಾಬ್ದಾರಿಯನ್ನು ನೇತೃತ್ವವನ್ನು ವಹಿಸಿಕೊಳ್ಳಬೇಕು. ಅದು ಅವರ ಕರ್ತವ್ಯವೂ ಹೌದು. ಅದನ್ನು ಕೇಳುವುದು ಮತ್ತು ಪಡೆಯುವುದು ಸುಳ್ಯದ ಮಾತ್ರ ಅಲ್ಲ ದ.ಕ. ಜಿಲ್ಲೆಯ ಮತದಾರರ ಹಕ್ಕು ಮತ್ತು ಕರ್ತವ್ಯ. ಇದರಿಂದ ಜಿಲ್ಲೆಯ ಇತರ ಕ್ಷೇತ್ರದ ದಲಿತರಿಗೆ ಮೀಸಲಾತಿ ದೊರಕುತ್ತದೆ, ಜನರಲ್ ಸೀಟಿಗಾಗಿ ಸುಳ್ಯದ ಮೀಸಲಾತಿ ಕ್ಷೇತ್ರ ಇತರ ಕ್ಷೇತ್ರ ಹುಡುಕುವುದು ನಿಲ್ಲುತ್ತದೆ ಎಂದು ಹೇಳಲು ಬಯಸುತ್ತೇನೆ.