ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು  ಹೋಬಳಿ ಘಟಕದ  ಪದಾಧಿಕಾರಿಗಳ ಪದ ಸ್ವೀಕಾರ- ಕೃಷಿ ಸಾಹಿತ್ಯ ಸಂಭ್ರಮ- ಕಡಮಜಲು ಸುಭಾಸ್ ರೈ 74ರ ಸಂಭ್ರಮ, ಸುದರ್ಶನ್ ಮೂಡಬಿದ್ರೆ ದಂಪತಿ ಹುಟ್ಟುಹಬ್ಬ ಆಚರಣೆ

0

ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು  ಪುತ್ತೂರು ಹೋಬಳಿ ಘಟಕದ ಪದ ಸ್ವೀಕಾರ ಸಮಾರಂಭವು ಫೆ. 6 ರಂದು ಕೆದಂಬಾಡಿಯ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಲಿದೆ.
ನೂತನ ಅಧ್ಯಕ್ಷರಾಗಿ ಕಡಮಜಲು ಸುಭಾಷ್ ರೈ, ಕಾರ್ಯದರ್ಶಿಯಾಗಿ ಸಿ. ಶೇ. ಕಜೆಮಾರ್, ಕೋಶಾಧ್ಯಕ್ಷರಾಗಿ ಎ. ಕೆ. ಜಯರಾಮ ರೈ ಕೆಯ್ಯೂರು, ಸಂಘಟನಾ ಕಾರ್ಯದರ್ಶಿಯಾಗಿ ವಿನೋದ್ ಕುಮಾರ್ ಕೆ.ಎಸ್., ಸದಸ್ಯರಾಗಿ ಪೂರ್ಣಿಮಾ ಪೆರ್ಲಂಪಾಡಿ, ಬಾಬು ಟಿ, ಡಾ. ಮನಮೋಹನ್ ಎಂ., ಎಸ್. ಡಿ. ವಸಂತ ಸರ್ವೆದೋಳ, ಎಸ್. ಪಿ. ಬಶೀರ್ ಶೇಖಮಲೆ, ಪದನಿಮಿತ್ತ ಸದಸ್ಯರಾಗಿ ಶಿಕ್ಷಣ ಸಂಯೋಜಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪ್ರಾಂಶುಪಾಲರು, ಸರಕಾರಿ ಪದವಿಪೂರ್ವ ಕಾಲೇಜು ಕುಂಬ್ರ ರವರುಗಳು ಪದ ಸ್ವೀಕಾರ ಮಾಡಲಿದ್ದಾರೆ.

ದತ್ತಿನಿಧಿ ಉಪನ್ಯಾಸ
ಇದೇ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಕೆಯ್ಯೂರಿನಲ್ಲಿ ನಡೆದ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಅಂದಿನ ಪುತ್ತೂರು ಕಸಾಪ  ಅಧ್ಯಕ್ಷರಾದ  ಬಿ. ಐತಪ್ಪ ನಾಯ್ಕ್, ಅವರು ಇರಿಸಿದ   ದತ್ತಿ ನಿಧಿ  ಉಪನ್ಯಾಸ ಕಾರ್ಯಕ್ರಮವು  ‘ಕೃಷಿ ಸಾಹಿತ್ಯ ಸಂಭ್ರಮ’ ಎಂಬ ಹೆಸರಿನಿಂದ  ಪ್ರಕೃತಿಪರ  ಕೃಷಿಕರಾದ ಮಿತ್ತಬಾಗಿಲಿನ ಬಿ. ಕೆ. ಪರಮೇಶ್ವರ್ ರಾವ್ ಅವರ “ಕೃಷಿ – ಸಾಹಿತ್ಯ ವೈವಿಧ್ಯ” ಎಂಬ ಉಪನ್ಯಾಸದ  ಮೂಲಕ ನಡೆಯಲಿದೆ.


ಕಾರ್ಯಕ್ರಮದ  ಅಧ್ಯಕ್ಷರಾಗಿ ಕಸಾಪ ಜಿಲ್ಲಾಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್, ಉದ್ಘಾಟಕರಾಗಿ ಹಿರಿಯ ವಿದ್ವಾಂಸರಾದ ಡಾ. ತಾಳ್ತಜೆ ವಸಂತಕುಮಾರ್, ಗೌರವ ಉಪಸ್ಥಿತಿಯಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಮುಖ್ಯ ಅತಿಥಿಗಳಾಗಿ ಭಾರತೀಯ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ದಿನಕರ ಅಡಿಗ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ  ರೈ ಕೋರಂಗ ಭಾಗವಹಿಸಲಿದ್ದಾರೆ.

ಕಡಮಜಲು 74ರ ಸಂಭ್ರಮ – ಸುದರ್ಶನ್‌ ಮೂಡಬಿದ್ರೆ ದಂಪತಿ ಹುಟ್ಟುಹಬ್ಬ (ಫೊಟೋ – ಸುದರ್ಶನ್‌ ಮೂಡಬಿದ್ರೆ ದಂಪತಿ)
ಇದೇ ಕಾರ್ಯಕ್ರಮದಲ್ಲಿ ಕಸಾಪ ಪುತ್ತೂರು ಹೋಬಳಿ ಘಟಕದ ನೂತನ ಅಧ್ಯಕ್ಷರೂ ಆದ ರಾಷ್ಟ್ರೀಯ ಕೃಷಿ ಪ್ರಶಸ್ತಿ ಚಿನ್ನದ ಪದಕ ಪುರಸ್ಕೃತರಾದ ಕಡಮಜಲು ಸುಭಾಸ್‌ ರೈಯವರ 74ನೇ ಹುಟ್ಟುಹಬ್ಬ ಸಂಭ್ರಮವು ಭಾರತೀಯ ಜನತಾ ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡಬಿದ್ರೆ ದಂಪತಿಯ ಹುಟ್ಟುಹಬ್ಬ ಆಚರಣೆಯೊಂದಿಗೆ ನಡೆಯಲಿದೆ.


ಯಕ್ಷ ಸಾಹಿತ್ಯ ಸಂಭ್ರಮ
ಕಾರ್ಯಕ್ರಮದಲ್ಲಿ  ವಿಶೇಷ ಆಕರ್ಷಣೆಯಾಗಿ  ಮುಂಡಾಳಗುತ್ತು ಪ್ರಶಾಂತ್ ರೈ ಮತ್ತು ಬಳಗದವರಿಂದ  “ಯಕ್ಷ ಸಾಹಿತ್ಯ ಸಂಭ್ರಮ” ನಡೆಯಲಿದೆ.

LEAVE A REPLY

Please enter your comment!
Please enter your name here