ಈಶ್ವರಮಂಗಲ:ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಪುತ್ತೂರು ನೇತೃತ್ವದಲ್ಲಿ, ಪುತ್ತೂರು ಸ್ಕಿನ್ ಕ್ಲಿನಿಕ್ ಮತ್ತು ಲೇಸರ್ ಕೇಂದ್ರ ಬೊಳುವಾರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಈಶ್ವರಮಂಗಲ ಇವರ ಸಹಯೋಗದೊಂದಿಗೆ ಉಚಿತ ಚರ್ಮ ತಪಾಸಣೆ ಹಾಗೂ ಚರ್ಮ ರೋಗ ಸಲಹಾ ಶಿಬಿರ ,ಉಚಿತ ಸ್ಪರ್ಶ್ ಕುಷ್ಟರೋಗ ತಪಾಸಣೆ ,ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ, ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಲಯನ್ ವಸಂತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಅರೋಗ್ಯ ಕೇಂದ್ರ ಈಶ್ವರಮಂಗಳ ವೈದ್ಯಾಧಿಕಾರಿ ಡಾ. ನಿಖಿಲ್, ಪುತ್ತೂರು ಸ್ಕಿನ್ ಕ್ಲಿನಿಕ್ ನ ಚರ್ಮತಜ್ಞ ಡಾ. ಸಚಿನ್ ಮನೋಹರ್ ಶೆಟ್ಟಿ. ಲಯನ್ಸ್ ಪ್ರಾಂತ್ಯಧ್ಯಕ್ಷ ಲಯನ್ ಲ್ಯಾನ್ಸಿ ಮಸ್ಕರೆನ್ಹಸ್, ಸಭಾಧ್ಯಕ್ಷತೆ ಪುತ್ತೂರು ಕ್ಲಬ್ ಅಧ್ಯಕ್ಷ ಲಯನ್ ಸದಾಶಿವ ಟಿ ವಹಿಸಿದ್ದರು.
ವಲಯಧ್ಯಕ್ಷರಾದ ಲಯನ್ ಪವನರಾಮ, ಉಪಸ್ಥಿತರಿದ್ದರು. ಲಯನ್ಸ್ ಜಿಲ್ಲಾ ಸಂಪುಟ ಜೊತೆ ಕೋಶಾಧಿಕಾರಿ ಲಯನ್ ಟಿ ಸದಾನಂದ ಶೆಟ್ಟಿ ಸ್ವಾಗತಿಸಿ, ನಿವೃತ್ತ ಜೀವವಿಮಾ ನಿಗಮ ಉನ್ನತ ಅಧಿಕಾರಿ,ಲಯನ್ ಯು. ನಾರಾಯಣ ಗೌಡ ಕಾರ್ಯಕ್ರಮ ನಿರೂಪಿಸಿದರು. ಅರೋಗ್ಯ ಕೇಂದ್ರದ ಸಿಬ್ಬಂದಿಗಳು ಸಹಕರಿಸಿದರು. ನೂರಕ್ಕೂ ಮಿಕ್ಕಿ ನಾಗರಿಕರು ಶಿಬಿರದ ಪ್ರಯೋಜನ ಪಡೆದರು.