




ಪುತ್ತೂರು: ದಕ್ಷಿಣ ಕನ್ನಡ ಉಡುಪಿ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಕಾರ್ಯಕ್ಷೇತ್ರವನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ವತಿಯಿಂದ ಕೇಂದ್ರ ಜವಳಿ ಮಂತ್ರಾಲಯದ ಕರ ಕುಶಲ ಆಯುಕ್ತರ ಕಛೇರಿಯ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆಯಲ್ಲಿ ಕಾವಿ ಕಲೆಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಡಿ.14ರಂದು ಹಾವಂಜೆಯಲ್ಲಿ ನಡೆಯಿತು.








ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ಗ್ರಾಮೀಣ ಗುಡಿ ಕೈಗಾರಿಕೆಗಳು, ಕರ ಕುಶಲ ಕಲೆಗಲ ಅಭಿವೃದ್ದಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘವಾಗಿದ್ದು ಕಾವಿ ಕಲೆಯು ಅತೀ ಪುರಾತನ ಕಲೆಯಾಗಿದ್ದು ನಶಿಸಿ ಹೋಗುವ ಹಂತದಲ್ಲಿದ್ದು ಸದ್ರಿ ಕಲೆಯ ಬೆಳವಣಿಗೆಗಾಗಿ ಹಾವಂಜೆ ಗ್ರಾಮ ಪಂಚಾಯತ್ ಪ್ರದೇಶದ 30 ಜನ ಕುಶಲ ಕರ್ಮಿಗಳನ್ನು ಸೇರಿಸಿ ಕಾರ್ಯಾಗಾರವನ್ನು 25 ದಿನಗಳ ಕಾಲ ನಡೆಸಲಾಯಿತು. ಡಾ. ಜನಾರ್ದನ ಹಾವಂಜೆಯವರು ಕಾವಿ ಕಲೆಯಲ್ಲಿ ಪರಿಣತಿ ಹೊಂದಿದವರಾಗಿದ್ದು ಅವರ ನೇತೃತ್ವದಲ್ಲಿ ತರಬೇತಿ ನಡೆಯಿತು.

ದೆಹಲಿಯ ಬ್ರಿಜೇಶ್ ಜೈಶ್ವಾಲ್ ರವರು ತರಬೇತಿಗೆ ತಮ್ಮ ನೆಲಯಲ್ಲಿ ಸಹಕಾರವನ್ನು ನೀಡಿದರು. ಕಾವಿ ಕಲೆಯನ್ನು ಕುಂಬಾರಿಕೆ ಉತ್ಪನ್ನಗಳ ಮೇಲೆ. ಬಟ್ಟೆ, ಮರದ ಸಾಮಾಗ್ರಿಗಳ ಮೇಲೆ ಉಪಯೋಗಿಸಿ ಕಾವಿ ಕಲೆಯನ್ನು ದೈನಂದಿನ ಬಳಕೆಯನ್ನು ಯಾವ ರೀತಿಯಲ್ಲಿ ಬಳಸಿ ಉತ್ಪನ್ನಗಳ ಮೌಲ್ಯ ವರ್ದನೆ ಮಾಡಬಹುದೆಂದು ತಿಳಿಸಿಕೊಡಲಾಯಿತು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕರಾದ ಗಣೇಶ್ ಕುಲಾಲ್ ಮತ್ತು ಸೇಸಪ್ಪ ಕುಲಾಲ್ ರವರು ಭಾವವಹಿಸಿದ್ದರು. ಕರಕುಶಲ ಅಭಿವೃದ್ದಿ ಮಂತ್ರಾಲಯದ ಸೇವಾ ಕೇಂದ್ರ ಮಂಗಳೂರು ಇದರ ಸಹಾಯಕ ನಿರ್ದೇಶಕಿ ರಾಜೇಶ್ವರಿ ಕೆ ಎಂ ರವರು ತರಬೇತಿ ಕಾರ್ಯಕ್ರಮದ ಬಗ್ಗೆ ಹಾಗೂ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹಾವಂಜೆ ಗ್ರಾಮ ಪಂಚಾಯತ್ ನ ಅದ್ಯಕ್ಷೆ ಆಶಾ ಪೂಜಾರಿ ಅವರು ಸ್ಥಳೀಯ ಕರಕುಶಲ ಕರ್ಮಿಗಳು ಇನ್ನಷ್ಟು ತೊಡಗಿಸಿಕೊಂಡು ನಮ್ಮ ಗ್ರಾಮದ ಅಭಿವೃದ್ಧಿ ಆಗಲಿ ಎಂದು ಆಶಿಸಿದರು. ತರಬೇತಿಯನ್ನು ಸಹಕಾರ ಸಂಘದ ಸೇವಾ ಭಾಗವಾಗಿ ಹಾವಂಜೆಯಲ್ಲಿ ನಡೆಸಲಾಯಿತು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಜನಾರ್ದನ ಮೂಲ್ಯ ಉಪಸ್ಥಿತರಿದ್ದರು.
ಕಾವಿ ಕಲೆ ಹೊರಪ್ರಪಂಚಕ್ಕೆ ಪಸರಿಸಬೇಕು..
ಕಾವಿ ಕಲೆಯಲ್ಲಿ ಭಾಗವಹಿಸಿದ ಎಲ್ಲಾ ಕರಕುಶಲಕಾರರು ಪಡೆದ ತರಬೇತಿಯನ್ನು ಮುಂದುವರಿಸಿ ಈ ಭಾಗದಲ್ಲಿ ಕಾವಿ ಕಲೆ ಇನ್ನಷ್ಟು ಹೊರ ಪ್ರಪಂಚಕ್ಕೆ ಪಸರಿಸುವಂತೆ ತೊಡಗಿಸಿಕೊಳ್ಳಬೇಕಾಗಿದೆ.
ಎಸ್ ಜನಾರ್ದನ ಮೂಲ್ಯ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು








