




ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಮುಖ್ಯರಸ್ತೆಯಲ್ಲಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಲರ‍್ಸ್‌ನಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ‘ಗ್ಲೋಫೆಸ್ಟ್’ ಡಿ.15ರಂದು ಚಾಲನೆ ದೊರೆಯಿತು.



ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ ಮಾತನಾಡಿ, ವಜ್ರಾಭರಣಗಳನ್ನು ಧರಿಸುವುದು ಹಾಗೂ ಖರೀದಿಸುವುದು ಸಾಂಸ್ಕೃತಿಕವಾಗಿದೆ. ವಜ್ರ ಅಂದರೆ ಕೇವಲ ಕಲ್ಲಲ್ಲ. ಅದು ಶುದ್ದತೆ, ಶಕ್ತಿ ವರ್ಧಕ ಹಾಗೂ ಪ್ರೇಮ, ವಿಶ್ವಾಸಗಳನ್ನು ಸೂಚಿಸುತ್ತದೆ. ನಂಬಿಕೆ ಮತ್ತು ವಿಶ್ವಾಸದ ಜೊತೆಗೆ ವೈವಿದ್ಯಮಯವಾದ ವಿನ್ಯಾಸಗಳು ಜಿ.ಎಲ್ ಆಚಾರ್ಯ ಮಳಿಗೆಯ ವೈಶಿಷ್ಠ್ಯವಾಗಿದೆ ಎಂದು ಹೇಳಿದರು.





ಆಡಳಿತ ನಿರ್ದೇಶಕ ಸುಧನ್ವ ಬಿ. ಆಚಾರ್ಯ ಮಾತನಾಡಿ, ವಜ್ರಗಳಲ್ಲಿ ನೈಜ ಹಾಗೂ ಲ್ಯಾಬ್‌ನಲ್ಲಿ ತಯಾರಾಗುವ ವಜ್ರಗಳು ಎಂಬ ಎರಡು ವಿಧಗಳಿದ್ದು ನಮ್ಮಲ್ಲಿ ನೈಜ ವಜ್ರಗಳು ಮಾತ್ರವೇ ಲಭ್ಯವಿದೆ. ನೈಜ ವಜ್ರಗಳ ಮೌಲ್ಯವು ಭೂಮಿ ಹುಟ್ಟಿದಷ್ಟೇ ಹಳೆಯದು. ಇವುಗಳ ಬೆಲೆ ನಿರಂತರವಾಗಿ ಏರುತ್ತಲೇ ಬಂದಿದೆ. ಆದರೆ ಲ್ಯಾಬ್‌ನಲ್ಲಿ ತಯಾರಿಸಿದ ವಜ್ರಗಳ ಬೆಲೆ ಕಳೆದ ಕೆಲ ವರ್ಷಗಳಲ್ಲಿ ಬಹಳಷ್ಟು ಕುಸಿದಿದೆ. ಮಳಿಗೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಜ್ರಾಭರಣಗಳ ಉತ್ತಮ ಸಂಗ್ರಹದೊಂದಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಗ್ಲೋ ಫೆಸ್ಟ್‌ನಲ್ಲೇನಿದೆ….!
ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ರೂ.7000 ವರೆಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ವೈವಿಧ್ಯಮಯ ವಜ್ರಾಭರಣಗಳ ವಿನೂತನ ಸಂಗ್ರಹವಿದ್ದು, ವಜ್ರಾಭರಣಗಳು ದುಬಾರಿ ಎಂದೇ ಭಾವನೆಯಲ್ಲಿರುವ ಜನರಿಗೆ ಕೈಗೆಟಕುವ ದರದಲ್ಲೂ ವಜ್ರಾಭರಣಗಳು ಲಭ್ಯವಿದೆ. ವಜ್ರಾಭರಣದ ಬೆಲೆ ರೂ.3500ರಿಂದ ಪ್ರಾರಂಭವಾಗುತ್ತದೆ. ಗ್ಲೋ ವಜ್ರಾಭರಣಗಳು ಅಂತರಾಷ್ಟ್ರೀಯ ಪ್ರಯೋಗಾಲಯದಿಂದ ಪ್ರಮಾಣಿಕರಿಸಲ್ಪಟ್ಟ, ಉತ್ಕೃಷ್ಟ ಶ್ರೇಣಿಯ ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ ನೆಕ್ಸಸ್, ಬಳೆಗಳ ವಿವಿಧ ವಿನ್ಯಾಸಗಳ ಅಮೋಘ ಸಂಗ್ರಹವಿದೆ. 3,600ಕ್ಕೂ ಮಿಕ್ಕಿದ ಡಿಸೈನ್ ಗಳಲ್ಲಿ ಕಣ್ಮನ ಸೆಳೆಯುವ ವಜ್ರಾಭರಣಗಳ ಅಮೋಘ ಸಂಗ್ರಹವಿದ್ದು, ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಮರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳು ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ. ಜೊತೆಗೆ ನುರಿತ ತಜ್ಞರಿಂದ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಪ್ರತಿಷ್ಠಿತ ಪ್ರಮಾಣೀಕೃತ ಏಜೆನ್ಸಿಗಳಿಂದ ಧೃಡೀಕರಣಗೊಂಡ ವಜ್ರಾಭರಣಗಳ ಶ್ರೇಣಿ. ಪ್ರಮಾಣೀಕೃತ ಇಎಫ್ ಬಣ್ಣದ ಹಳೆಯ ವಜ್ರಾಭರಣಗಳ ವಿನಿಮಯ, ಮರುಖರೀದಿಯ ಗ್ಯಾರಂಟಿ, ಅಚ್ಚರಿಯ ಕೊಡುಗೆ ಹಾಗೂ ಉಡುಗೊರೆಗಳನ್ನು ತಮ್ಮದಾಗಿಸುವ ಸುವರ್ಣಾವಕಾಶವಿದೆ.
ಪ್ಲೋರ್ ಮ್ಯಾನೇಜರ್ ಬಾರ್ಗವ್ ಸ್ವಾಗತಿಸಿ, ವಂದಿಸಿದರು. ಶೋರೂಂ ಮ್ಯಾನೇಜರ್ ಶೇಖರ್ ಮತ್ತು ಪುರಂದರ, ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಸಹಕರಿಸಿದರು.ಮಳಿಗೆಯ ಆಡಳಿತ ನಿರ್ದೇಶಕ ಲಕ್ಷ್ಮೀಕಾಂತ ಆಚಾರ್ಯ, ಗ್ರಾಹಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಳೆದ ಹಲವು ವರ್ಷಗಳಿಂದ ಡಿಸೆಂಬರ್ ತಿಂಗಳಲ್ಲಿ ವಜ್ರಾಭರಣಗಳ ಮಹೋತ್ಸವ ಗ್ಲೋ ಪೆಸ್ಟ್ ಆಯೋಜಿಸಲಾಗುತ್ತಿದೆ. ಇದಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ವಿವಿಧ ವಿನ್ಯಾಸದ ವಜ್ರದ ಆಭರಣಗಳು ಮಳಿಗೆಯಲ್ಲಿ ಲಭ್ಯವಿದೆ. ಜೊತೆಗೆ ತರಬೇತಿ ಪಡೆದ ಸಿಬ್ಬಂದಿಗಳಿಂದ ವಜ್ರಾಭರಣಗಳ ಮಾಹಿತಿ ಅಭಿಯಾನವು ಗ್ಲೋ ಫೆಸ್ಟ್‌ನಲ್ಲಿದೆ. ಆ ಮೂಲಕ ಮಳಿಗೆಯಲ್ಲಿ ಪಾರದರ್ಶಕವಾಗಿ ವ್ಯವಹಾರ ನಡೆಸಲಾಗುತ್ತಿದೆ. ಫೆಸ್ಟ್ ಮೂಲಕ ಗ್ರಾಹಕರಿಗೆ ಉತ್ತಮ ದರ ಹಾಗೂ ಕೊಡುಗೆಗಳನ್ನು ನೀಡಲಾಗುತ್ತಿದೆ. ಡಿ.15ರಿಂದ ಪ್ರಾರಂಭಗೊಂಡು ಜ.15ರ ತನಕ ಗ್ಲೋ ಫೆಸ್ಟ್ ನಡೆಯಲಿದೆ.
-ಬಲರಾಮ ಆಚಾರ್ಯ, ಚೆಯರ್‌ಮೆನ್ ಜಿ.ಎಲ್ ಆಚಾರ್ಯ ಜ್ಯುವೆಲ್ಲರ‍್ಸ್









